ಕೊಪ್ಪಳದಲ್ಲಿ ಹೆಲ್ಮೆಟ್​ ಧರಿಸಿದೇ ಬೈಕ್​ ಓಡಿಸುವವರಿಗೆ ಗುರುವಾರ ದಂಡ ವಿಧಿಸಿದರು. 
ಜಿಲ್ಲೆ

ಹೆಲ್ಮೆಟ್​ ಧರಿಸದವರಿಗೆ ಬಿತ್ತು ದಂಡ

Kopala - Raveendra V K

ಕೊಪ್ಪಳ: ಜಿಲ್ಲಾದ್ಯಂತ ಬೈಕ್​ ಸವಾರರಿಗೆ ಹೆಲ್ಮೆಟ್​ ಕಡ್ಡಾಯಗೊಳಿಸಿರುವ ಪೊಲೀಸರು ಗುರುವಾರ ನಗರದಾದ್ಯಂತ ಹೆಲ್ಮೆಟ್​ ಧರಿಸದವರಿಗೆ ದಂಡದ ಬಿಸಿ ಮುಟ್ಟಿಸಿದರು. ಕೆಲವರು ೈನ್​ ಕಟ್ಟಿದರೆ, ಸರ್ಕಾರಿ ಅಧಿಕಾರಿಗಳು ಸೇರಿ ಇತರರು ಆರಕ್ಷಕರೊಂದಿಗೆ ವಾಗ್ವಾದ ನಡೆಸಿದ ಟನೆಗಳು ನಡೆದವು.

ನೂತನ ಎಸ್ಪಿ ಡಾ.ರಾಮ್​ ಸಂಚಾರಿ ನಿಯಮಗಳ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಿದ್ದಾರೆ. ವಾರದ ಹಿಂದೆ ಜಿಲ್ಲಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್​ ಧರಿಸುವಂತೆ ಜಾಗೃತಿ ಮೂಡಿಸಲಾಗಿದೆ. ಜು.1ರಿಂದ ಕಟ್ಟುನಿಟ್ಟುಗೊಳಿಸಲಾಗಿದೆ. ಬೆಳಂಬೆಳಗ್ಗೆ ಹೆಲ್ಮೆಟ್​ ಇಲ್ಲದೇ ರಸ್ತೆಗಿಳಿದವರಿಗೆ ಪೊಲೀಸರು ೈನ್​ ಕಟ್ಟಿಸುವ ಮೂಲಕ ಸಂಚಾರಿ ನಿಯಮಗಳ ಅರಿವು ಮೂಡಿಸುವ ಕೆಲಸ ಮಾಡಿದರು.

ಕೇಂದ್ರ ಬಸ್​ ನಿಲ್ದಾಣ, ಅಶೋಕ ವೃತ್ತ, ಬಸವೇಶ್ವರ ವೃತ್ತ ಸೇರಿ ನಗರದ ಪ್ರಮುಖ ಸ್ಥಗಳಲ್ಲಿ ಕಾರ್ಯಾಚರಣೆ ನಡೆಯಿತು. ಹೆಲ್ಮೆಟ್​ ಇಲ್ಲದವರ ಗಾಡಿ ಹಿಡಿದು ದಂಡ ವಸೂಲಿ ಮಾಡಿದರು. ಕೆಲವರು ವಾದ ಮಾಡುವುದು, ಜನಪ್ರತಿನಿಧಿಗಳಿಗೆ ಕರೆ ಮಾಡಿ ಹೇಳಿಸುವ ಕೆಲಸ ಮಾಡಿದರು. ಇನ್ನು ಜಿಲ್ಲಾಧಿಕಾರಿ ಕಚೇರಿ ಮಹಿಳಾ ಸಿಬ್ಬಂದಿ ಹೆಲ್ಮೆಟ್​ ಇಲ್ಲದೇ ಸವಾರಿ ಮಾಡಿದ್ದು ಕಂಡುಬಂತು. ತಡೆದ ಪೊಲೀಸರೊಂದಿಗೆ ವಾದ ಮಾಡಿ ವಾಹನ ಅಲ್ಲೇ ಬಿಟ್ಟು ಹೋದರು. ದಂಡ ಕಟ್ಟದೇ ವಾಹನ ಬಿಟ್ಟು ಹೋದವರು ಮತ್ತೆ ಕೊಂಡೊಯ್ಯದಂತೆ ಚೈನ್​ ಹಾಕಿ ವಾಹನ ಜಪ್ತಿ ಮಾಡಲಾಯಿತು.

ಮತ್ತೊಂದೆಡೆ ಹೆಲ್ಮೆಟ್​ ಮಾರಾಟಗಾರರು ಹೆಚ್ಚಿದ್ದಾರೆ. ನಗರದ ವಿವಿಧೆಡೆ ಮಾರಾಟದಲ್ಲಿ ತೊಡಗಿದ ದೃಶ್ಯಗಳು ಕಂಡುಬಂದವು. ಪೊಲೀಸರಿಂದ ತಪ್ಪಿಸಿಕೊಳ್ಳಲು ಜನರು ಹೆಲ್ಮೆಟ್​ ಖರೀದಿಗೆ ಮುಗಿಬಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅಸುರಕ್ಷತಾ ಹಾಗೂ ಗುಣಮಟ್ಟ ಇಲ್ಲದ ಹೆಲ್ಮೆಟ್​ ಮಾರಾಟ ಶುರುವಿಟ್ಟುಕೊಂಡಿದ್ದಾರೆ. ದುಡ್ಡು ಕೊಟ್ಟು ಖರೀದಿಸಿದರೂ ಅಪಘಾತ ವೇಳೆ ಸುರಕ್ಷತೆ ಇರುವುದಿಲ್ಲ. ಈ ಬಗ್ಗೆಯೂ ಪೊಲೀಸರು ಗಮನಹರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.