?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ನರಕ ಸದೃಶ ಮಾಗಡಿ ಆರ್‌ಆರ್ ರಸ್ತೆ

ಗಂಗಾಧರ ಬಿ ವಿ

ವಾಹನ ಸವಾರರು, ಪಾದಚಾರಿಗಳಿಗೆ ಓಡಾಡಲು ಸಮಸ್ಯೆ ರಸ್ತೆಯ

ಎರಡೂ ಕಡೆ ಗಂಟೆಗಟ್ಟಲೇ ನಿಲ್ಲುವ ವಾಹನಗಳು

ಎಂ.ಎಸ್. ಸಿದ್ದಲಿಂಗೇಶ್ವರ ಮಾಗಡಿ


ಪಟ್ಟಣದ ಪ್ರಮುಖ ಆರ್‌ಆರ್ ರಸ್ತೆಯಲ್ಲಿ ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ಪರದಾಡಬೇಕಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಅಂಗಡಿ-ಮುಂಗಟ್ಟು, ಹೋಟಲ್, ಬಾರ್‌ಗಳಿದ್ದು, ಹೂ, ಹಣ್ಣು, ಸೊಪ್ಪು, ತರಕಾರಿ ವ್ಯಾಪಾರವೂ ನಡೆಯುತ್ತದೆ. ರಸ್ತೆಯ ಎರಡೂ ಬದಿ ಕಾರು, ಆಟೋ, ಬೈಕ್‌ಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ಓಡಾಡಲು ನರಕಯಾತನೆ ಅನುಭವಿಸಬೇಕಿದೆ ಹಾಗೂ ವಾಹನ ಸವಾರರ ಪಾಡು ದೇವರಿಗೇ ಪ್ರೀತಿ.

ಕೆಂಪೇಗೌಡ ಸರ್ಕಲ್ ಬಳಿಯೂ ಕಾರು ಚಲಾಯಿಸುವುದು ಇರಲಿ ಒಂದು ಬೈಕ್ ತೆರಳಲು ಸಾಧ್ಯವಾಗದಂತಾಗಿದೆ. ಈ ರಸ್ತೆಯಲ್ಲಿ ಬಾರ್‌ಗಳಿದ್ದು ಬಹುತೇಕ ಮಂದಿ ಬಾರ್‌ಗಳ ಎದುರೇ ವಾಹನವನ್ನು ನಿಲ್ಲಿಸಿ ತೆರಳುತ್ತಾರೆ. ಗಂಟೆಗಟ್ಟಲೇ ವಾಹನ ನಿಲ್ಲುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಈ ವೇಳೆ ಪ್ರಶ್ನಿಸಿದವರ ಜತೆ ಜಗಳಕ್ಕೆ ನಿಲ್ಲುತ್ತಾರೆ. ಇದರಿಂದ ಇತರ ಅಂಗಡಿ ಮುಂಗಟ್ಟುಗಳ ಮಾಲೀಕರಿಗೂ ಕಿರಿಕಿರಿ ಉಂಟಾಗುತ್ತಿದೆ.

ಆರ್‌ಆರ್ ರಸ್ತೆಯಲ್ಲಿ ನೂರಾರು ದಿನಸಿ ಅಂಗಡಿಗಳಿದ್ದು, ಈ ಅಂಗಡಿಗಳಿಗೆ ಬೆಂಗಳೂರು, ತುಮಕೂರು ಇತರ ಕಡೆಯಿಂದ ಲಾರಿಯಲ್ಲಿ ದಿನಸಿ ಪದಾರ್ಥಗಳು ಬರುತ್ತವೆ. ಈ ಲಾರಿಗಳು ಅನ್‌ಲೋಡ್ ಮಾಡಲು ನಿಲ್ಲುವುದರಿಂದ ಈ ರಸ್ತೆಯಲ್ಲಿ ಒಂದು ವಾಹನವೂ ಓಡಾಡಲು ಸಾಧ್ಯವಾಗುವುದಿಲ್ಲ. ಇನ್ನು ಹಬ್ಬ ಹರಿದಿನಗಳಲ್ಲಂತೂ ಸಮಸ್ಯೆ ಇನ್ನೂ ಬಿಗಡಾಯಿಸಿರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಟ್ರಾಫಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸರು 2 ವರ್ಷದ ಹಿಂದೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿದ್ದರು. ಆದರೆ ಯಥಾಸ್ಥಿತಿ ಉಂಟಾಗಿದೆ. ಆರ್‌ಆರ್ ರಸ್ತೆಯಲ್ಲಿನ ಹೂವು, ಹಣ್ಣು, ತರಕಾರಿ, ಸೊಪ್ಪು ಮಾರುವವರಿಗೆ ಪುರಸಭೆ ವತಿಯಿಂದ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ ಎಂಬುದು ಸ್ಥಳಿಯರ ಮಾತಾಗಿದೆ.

ಶಾಸಕರು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಹೈಟೆಕ್ ಮಾರುಕಟ್ಟೆ ನಿರ್ಮಾಣ ಸಂಬಂಧ ಶಾಸಕರು ಭರವಸೆ ನೀಡಿದ್ದರೂ, ಪುರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗದಿರುವುದು ಬೇಸರದ ಸಂಗತಿಯಾಗಿದೆ.

ಆರ್‌ಆರ್ ರಸ್ತೆಯಲ್ಲಿ ನಾಗರಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಸಭೆ ನಡೆಸಿತ್ತು. ಈ ವೇಳೆ ರಸ್ತೆಯ ಒಂದು ಕಡೆ ವಾಹನ ನಿಲುಗಡೆಗೆ ಚರ್ಚಿಸಲಾಗಿತ್ತು. ಇದನ್ನು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಅನುಷ್ಠಾನಗೊಳಿಸಲಾಗುವುದು.

ಶಿವರುದ್ರಯ್ಯ ಪುರಸಭೆ ಮುಖ್ಯಾಧಿಕಾರಿ

ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅವರಿಂದ ಆದೇಶ ಬಂದ ಕೂಡಲೇ ಈ ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಗೆ ದಂಡ ಹಾಕಲಾಗುವುದು. ಈ ಬಗ್ಗೆ ವರ್ತಕರ ಸಭೆ ಕರೆಯಲಾಗಿದೆ.

ಜಿ.ವೈ.ಗಿರಿರಾಜು, ಸಿಪಿಐ, ಮಾಗಡಿ