Syringe, medical injection in hand, palm or fingers. Medicine plastic vaccination equipment with needle. Nurse or doctor. Liquid drug or narcotic. Health care in hospital. 
ಜಿಲ್ಲೆ

ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ

ಎ. ಆರ್. ರಘುರಾಮ

 ತಿ.ನರಸೀಪುರ : ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಕಾಲೇಜು ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕಾರ್ಮಿಕ ಮಂಡಳಿಯ ಸಹಯೋಗದೊಂದಿಗೆ ನಡೆದ ತಪಾಸಣಾ ಶಿಬಿರದಲ್ಲಿ ನೋಂದಾಯಿತ ಕಾರ್ಮಿಕರು ನೇತ್ರ ತಪಾಸಣೆ ಸೇರಿದಂತೆ ಬಿಪಿ, ಶುಗರ್ ಹಾಗೂ ರಕ್ತದೊತ್ತಡದ ಪ್ರಮಾಣವನ್ನು ಪರೀಕ್ಷಿಸಿಕೊಂಡರು. ಇಎಸ್‌ಐ ವೈದ್ಯರು ಹಾಗೂ ಸಿಬ್ಬಂದಿ ಕಾರ್ಮಿಕರ ತಪಾಸಣೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ಶ್ರಮದ ದುಡಿಮೆಯನ್ನೇ ಜೀವನಕ್ಕೆ ಆಧಾರವಾಗಿಸಿಕೊಂಡ ಅಸಂಘಟಿತ ಕಾರ್ಮಿಕರ ಆರೋಗ್ಯ ಸಂರಕ್ಷಣೆಗೆ ಮಹತ್ವ ನೀಡಿ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು. ಸಂಘದ ಸದಸ್ಯರಾಗಿ ನೋಂದಾಯಿಸಿಕೊಂಡು ಕಾರ್ಮಿಕ ಇಲಾಖೆ ಕಾಲ ಕಾಲಕ್ಕೆ ನೀಡುವ ಸರ್ಕಾರದ ಸೌಲಭ್ಯಗಳು ಹಾಗೂ ವಿಮಾ ಸೌಲಭ್ಯಗಳನ್ನು ಕುಟುಂಬದ ಕ್ಷೇಮಕ್ಕೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ತಾಲೂಕು ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷ ಸಿ.ದಯಾನಂದ ಭರಣಿ , ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮತ್ತು ಪದಾಧಿಕಾರಿಗಳು ಇದ್ದರು.