ಜಿಲ್ಲೆ

ವಿದೇಶಿ ಪ್ರವಾಸಿಗನ ಮೇಲೆ ಹೆಜ್ಜೇನು ದಾಳಿ

ಗೋಕರ್ಣ: ಇಲ್ಲಿನ ಪರ್ವತ ಪ್ರದೇಶದಲ್ಲಿ ಟ್ರೇಕಿಂಗ್​ಗೆ ಹೋಗಿ ವಾಪಸಾಗುತ್ತಿದ್ದಾಗ ವಿದೇಶಿ ಪ್ರವಾಸಿಗ ಫ್ರಾನ್ಸ್​ನ ಅಲೆಕ್ಸಿಸ್ ಜೆರ್ರಿ (36) ಹೆಜ್ಜೇನು ದಾಳಿಗೊಳಗಾಗಿ ಅಸ್ವಸ್ಥಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ತೀವ್ರವಾಗಿ ವಾಂತಿಗೊಳಗಾದ ಈತನಿಗೆ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದಾಧಿಕಾರಿ ಡಾ.ಜಗದೀಶ ನಾಯ್ಕ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದರು.

ದೆಹಲಿಯಲ್ಲಿ ಶಿಕ್ಷಕನಾಗಿರುವ ಅಲೆಕ್ಸಿಸ್ ದೆಹಲಿಯ ಇತರ ಮೂವರ ಜೊತೆಗೆ ಇಲ್ಲಿಗೆ ಬಂದಿದ್ದರು. ಘಟನೆಯಲ್ಲಿ ಆತನ ಜೊತೆಗಿದ್ದ ಮೂವರು ದಾಳಿಯಿಂದ ಬಚಾವಾಗಿದ್ದಾರೆ.