ಪಡುಬಿದ್ರಿ: ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಕಾಮಗಾರಿ ಪ್ರಗತಿಯಲ್ಲಿದ್ದು, ಗರ್ಭಗುಡಿ ಮಹಡಿಯ ಮರದ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ನವಗ್ರಹ ಶಾಂತಿ ಹೋಮ ಮತ್ತಿತರ ಧಾರ್ಮಿಕ ವಿಧಿಗಳು ನಡೆದ ಬಳಿಕ ಸುಂದರ ಕೆತ್ತನೆಯ ಮರದ ಶಿಲ್ಪಕಲಾಕೃತಿಗಳನ್ನು ಗರ್ಭಗುಡಿಗೆ ಹೊಂದಿಸುವ ಕಾರ್ಯ ಆರಂಭಗೊಂಡಿತು.
ದೇವಳದ ತಂತ್ರಿ ರಾಧಾಕೃಷ್ಣ ತಂತ್ರಿ ಎಡಪದವು, ಅರ್ಚಕರಾದ ರಾಮಚಂದ್ರ ಭಟ್, ಪದ್ಮನಾಭ ಭಟ್, ಶ್ರೀನಿವಾಸ ಆಚಾರ್ಯ, ಪದ್ಮನಾಭ ಆಚಾರ್ಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಮೊಕ್ತೇಸರರಾದ ಶಂಕರ ಶೆಟ್ಟಿ, ರವೀಂದ್ರ ಕೋಟ್ಯಾನ್, ಜಯಂತ್ ಪುತ್ರನ್, ಸಂಜೀವ ಟಿ., ಗಣೇಶ್ ಸಿ.ಆಚಾರ್ಯ, ಸುರೇಶ್ ದೇವಾಡಿಗ, ಪಾಂಡುರಂಗ ಕರ್ಕೇರ, ಇಂದಿರೇಶ್ ಸಾಲ್ಯಾನ್, ಜಯಂತಿ ಅಚಾರ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಎಚ್.ಎಸ್.ರಘುಪತಿ ಭಟ್, ಉಪಾಧ್ಯಕ್ಷರಾದ ಅರುಣ್ ಶೆಟ್ಟಿ ಪಡುಮನೆ, ಜಿನರಾಜ ಬಂಗೇರ, ಸುಧಾಕರ ಕರ್ಕೇರ, ಲೋಕೇಶ್ ಅಮೀನ್, ಹರೀಶ್ ದೇವಾಡಿಗ, ರಾಜೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ಹೆಜಮಾಡಿ, ಕೋಶಾಧಿಕಾರಿ ಎಚ್‌ಆರ್ ರಮೇಶ್ ಭಟ್, ಬೆಂಗಳೂರು ಸಮಿತಿಯ ಪುರುಷೋತ್ತಮ ಗುರಿಕಾರ, ಹೆಜಮಾಡಿ ಏಳೂರು ಮೊಗವೀರ ಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್, ನಾರಾಯಣ ಮೆಂಡನ್, ದಾಮೋದರ ಬಂಗೇರ, ಸಚಿನ್ ಜಿ.ನಾಯಕ್ ಉಪಸ್ಥಿತರಿದ್ದರು.