ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸೋಂಪುರ ಹೋಬಳಿಯ ಹೆಗ್ಗುಂದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಹನುಮಂತರಾಜು, ಉಪಾಧ್ಯಕ್ಷರಾಗಿ ಎಸ್.ರಾಜಣ್ಣ ಆಯ್ಕೆಯಾದರು.
13 ಮತಗಳ ಸದಸ್ಯ ಬಲದ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಹನುಮಂತರಾಜು, ಡಿ.ಸಿ.ಲೋಕೇಶ್, ಯಶೋದಮ್ಮ ಸ್ಪರ್ಧಿದ್ದರು. ಡಿ.ಸಿ.ಲೋಕೇಶ್ 3, ಯಶೋದಮ್ಮ 1 ಮತ ಪಡೆದು ಪರಾಭವಗೊಂಡರೆ, ಸಿ.ಹನುಮಂತರಾಜು 9 ಮತಗಳೊಂದಿಗೆ ಜಯ ಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ರಾಜಣ್ಣ ಅವಿರೋಧ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ವಿ.ಶಿವಕುಮಾರ್, ಸಹಾಯಕರಾಗಿ ಕಾರ್ಯದರ್ಶಿ ಐ.ಆರ್.ಕುಮಾರ, ಹಾಲು ಪರೀಕ್ಷಕ ಉದಯಕುಮಾರ, ಸಿಬ್ಬಂದಿ ರಾಮಯ್ಯ ಕಾರ್ಯ ನಿರ್ವಹಿಸಿದರು.
ಅಧ್ಯಕ್ಷ ಸಿ.ಹನುಮಂತರಾಜು ಮಾತನಾಡಿ, ರಾಜ್ಯದಲ್ಲಿ ಪಶು ಪಾಲನೆ ಮುಖ್ಯ ಕಸುಬಾಗಿದ್ದು, ನಾವೂ ಪಶು ಪಾಲನೆಯಿಂದ ಜೀವನ ಸಾಗಿಸುತ್ತಿದ್ದೇವೆ. ಸರ್ಕಾರ ರೈತರಿಗೆ ನೀಡುವ ಪಶು ಆಹಾರ ದರವನ್ನು ಕಡಿತಗೊಳಿಸಬೇಕು. ಎಲ್ಲರೂ ನಂದಿನಿ ಉತ್ತನ್ನ ಬಳಸುವ ಮೂಲಕ ಹೈನೋದ್ಯಮ ಪ್ರಗತಿ ಕಾಣಲು ಸಹಕಾರ ನೀಡಬೇಕು ಎಂದರು.
ನಿರ್ದೇಶಕರಾದ ಗಂಗಣ್ಣ, ಎಸ್.ರಾಜಣ್ಣ, ಆರ್.ಲೋಕೇಶ್, ಚಿಕ್ಕಲಯ್ಯ, ಸಿ.ರಮೇಶ, ಎಸ್.ರಂಗಸ್ವಾಮಯ್ಯ, ಡಿ.ಸಿ.ಲೋಕೇಶ, ಆರ್.ಹರೀಶ, ಸಿ.ಹನುಮಂತರಾಜು, ಸಾವಿತ್ರಮ್ಮ, ಸಂಜೀವಯ್ಯ, ಗೌರಮ್ಮ, ಯಶೋದಮ್ಮ ಇತರರು ಇದ್ದರು.