ಜಿಲ್ಲೆ

ಕೊಡಗು ಹೆಗ್ಗಡೆ ಸಮಾಜದಿಂದ ಸಿಎಂ ಭೇಟಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗು ಹೆಗ್ಗಡೆ ಸಮಾಜದ ನಿಯೋಗದಿಂದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಎ.ಎಸ್. ಪೊನ್ನಣ್ಣ ಅÀವರ ಮೂಲಕ ಬೆಂಗಳೂರಿನಲ್ಲಿನ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಭೇಟಿ ವೇಳೆ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಅರ್ಥಿಕ ನರವಿಗಾಗಿ ಮನವಿ ಸಲ್ಲಿಸಲಾಯಿತು.

ಇದಕ್ಕೆ ಪೂರಕವಾಗಿ ಸ್ಪಂದಿಸಿ ಮಾತನಾಡಿದ ಸಿದ್ದರಾಮಯ್ಯ, ಶಾಸಕ ಪೊನ್ನಣ್ಣ ಈ ವಿಚಾರವನ್ನು ಈಗಾಗಲೇ ತಿಳಿಸಿದ್ದು, ಅದಷ್ಟು ಶೀಘ್ರವಾಗಿ ಕೊಡಗು ಹೆಗ್ಗಡೆ ಸಮಾಜದ ಅಭಿವೃದ್ಧಿಗೆ ಅರ್ಥಿಕ ನೆರವು ಬಿಡುಗಡೆ ಮಾಡುವ ಭರವಸೆ ನೀಡಿದರು.

ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷÀ ಕೊರಕುಟ್ಟೀರ ಸರ ಚಂಗಪ್ಪ, ಮಾಜಿ ಅಧ್ಯಕ್ಷÀ ಪಡಿಞರಂಡ ಅಯ್ಯಪ್ಪ, ಉಪಾಧ್ಯಕ್ಷ ಚರ್ಮಂಡ ಪೂವಯ್ಯ, ಖಜಾಂಚಿಗಳಾದ ಕೊರಂಡ ಪ್ರಕಾಶ್ ನಾಣಯ್ಯ, ಪ್ರಮುಖರಾದ ಕೊರ್ಕಂಡ ಚಂದ್ರು ಮತ್ತಿತರರು ಇದ್ದರು.