ಮಡಿಕೇರಿ:
ಕೊಡಗು ಹೆಗ್ಗಡ ಸಮಾಜದ ವತಿಯಿಂದ ಮೂರ್ನಾಡುವಿನ ಬಾಚಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಾಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕ್ರಿಡಾಕೂಟದ ಸೀನಿಯರ್ ಕ್ರಿಕೆಟ್‌ನಲ್ಲಿ ಹಾಲುಗುಂದ ತಂಡ ಪಾರಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಂಕರಿಸಿತು.
ಮೊದಲು ಬ್ಯಾಟ್ ಮಾಡಿದ ಹಾಲುಗುಂದ ತಂಡ ಶ್ರೇಯಸ್ ಅರ್ಧ ಶತಕ ಮತ್ತು ಅವಿನಾಶ್ ೩೫ ರನ್ನುಗಳ ನೆರವಿನಿಂದ ನಿಗದಿತ ೮ ಓವರ್ ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೧೪ ರನ್ನುಗಳ ಗುರಿಯನ್ನು ನೀಡಿತು. ಪಾರಣೆ ತಂಡದ ಅಕ್ಷತ್ ೫ ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಪಾರಾಣೆ ತಂಡ ೫೩ ರನ್ನು ಗಳಿಸುವಷ್ಟೇ ಶಕ್ತರಾಗಿ ಸೋಲು ಒಪ್ಪಿಕೊಂಡಿತು.
ಉತ್ತಮ ಬ್ಯಾಟ್‌ಮ್ಯಾನ್, ಪಂದ್ಯ ಪುರುಷೋತ್ತಮ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಶ್ರೇಯಸ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಪಾರಣೆ ತಂಡದ ಅಕ್ಷತ್ ಪಡೆದುಕೊಂಡರು. ಜೂನಿಯರ್ ವಿಭಾದಲ್ಲಿ ಪೊನ್ನಂಪೇಟೆ ತಂಡವು ಬೆಟ್ಟಗೇರಿ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದಕೊಂಡಿತು ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೆವಿನ್ ಕುಟ್ಟಪ್ಪ ಪಡೆದುಕೊಂಡರು. ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಬಿಟ್ಟಂಗಾಲ ತಂಡವು ಪಾರಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಾಧ್ಯವಾಯಿತು.
ಇದೆ ಪ್ರಥಮ ಬಾರಿಗೆ ನಡೆದ ಹಗ್ಗ ಜಗ್ಗಾಟದಲ್ಲಿ ಹಾತೂರು ತಂಡ ಒಂಟಿಯಂಗಡಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಆಲಂಕರಿಸಿತು. ಪುರುಷರ ವಿಭಾಗದಲ್ಲಿ ಪಾರಣೆ ತಂಡವು ಹಾತ್ತೂರು ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಗಿಟ್ಟಿಸಿತು.
ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಕ್ರೀಡಾಕೂಟದ ಯಶಸ್ಸು ಕೊಡುಗ ಜಿಲ್ಲೆಯ ಜನತೆಯ ಕ್ರೀಡಾ ಪ್ರೇಮ ಮತ್ತು ಕ್ರೀಡಾ ಆಸಕ್ತಿಗೆ ಮತ್ತಷ್ಟು ಮೆರುಗು ನೀಡಿದೆಯೆಂದರು. ಮುಖ್ಯ ಅತಿಥಿಗಳಾಗಿ ಮಳ್ಳಡ ಪೂಣಚ್ಚ, ಸುತಾ ಪೂಣಚ್ಚ, ಕ್ರೀಡಾ ಸಮಿತಿ ಅಧ್ಯಕ್ಷರಾದ ಪಡಿಞರಂಡ ಪ್ರಭುಕುಮಾರ್, ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಖಚಾಂಚಿ ಪಾನಿಕುಟ್ಟಿರ ಕುಟ್ಟಪ್ಪ. ನಿರ್ದೇಶಕರಗಳಾದ ತೊರೇರ ಮುದ್ದಯ್ಯ, ಪದಿಕಂಡ ಸುನಾ. ಚಮರ್ಂಡ ಅಪ್ಪುಣು ಪೂವಯ್ಯ, ಮುರೀರ ಕುಶಾಲಪ್ಪ, ಕೊಪ್ಪಡ ಪಳಂಗಪ್ಪ, ಕೊಂಗೆಪಂಡ ರವಿ, ಮೂರೀರ ಶಾಂತಿ, ತಂಬಂಡ ಮಂಜುನಾಥ್, ಚಳಿಂಡ ಕಮಲ, ಪುದಿಯತಂಡ ಜಾಲಿ, ಪ್ರಮುಖರಾದ ತೊರೇರ ರಾಜ, ಬೊಳ್ಳಡಿಚಂಡ ರಂಜಿ, ಬೈರಿಕುಂದಿರ ಪ್ರವೀಣ್, ಪಡಿಞರಂಡ ಗಿರೀಶ್, ಕಾಕೇರ ರವಿ, ಪದಿಕಂಡ ಕುಶ, ಪಡಿಞರಂಡ ಕವಿತಾ, ತೊರೇರ ಉಮೇಶ್, ಕೊಂಗೆಪಂಡ ಕುಟ್ಟಪ್ಪ, ಪದಿಕಂಡ ಈಶ್ವರ ಮುಂತಾದವರು ಇದ್ದರು.