ಸಿರವಾರ: ತಾಲೂಕಿನ ಹೀರಾ ಗ್ರಾಮದಲ್ಲಿ ಬುಧವಾರ ಶ್ರೀಕೃಷ್ಣ ಜಯಂತಿ ಅಂಗವಾಗಿ ಬುಧವಾರ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಶ್ರೀಕೃಷ್ಣ ವೇಷದಲ್ಲಿ ಮಕ್ಕಳು ಹಾಗೂ ಮಹಿಳೆಯರು ಕಳಸರೋಹಣದೊಂದಿಗೆ ಮೆರುಗು ತಂದರು.
ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಅಯ್ಯಪ್ಪ ದೊರೆ ಮಾತನಾಡಿ, ಕೃಷ್ಣನು ಮನುಷ್ಯ ಜೀವನದಲ್ಲಿ ಜೀವನದಲ್ಲಿ ಬದುಕುವ ರೀತಿಯನ್ನು ತಿಳಿಸಿಕೊಟ್ಟಿದ್ದಾನೆ. ವಸುದೈವ ಕುಟುಂಬಕಂ ಎಂಬುದು ಜನರ ಜೀವನ ಶೈಲಿಯಾಗಲಿ ಎಂದರು.
ಇದನ್ನೂ ಓದಿ:
ಪ್ರಮುಖರಾದ ಮಲ್ಲಿಕಾರ್ಜುನ, ಶೇಕ್ ಹುಸೇನ ಸಾಬ್, ನರಸಣ್ಣ ಯಾದವ, ಕೆಂಚಣ್ಣ ಯಾದವ, ಯಮನಪ್ಪ ಕಸನದೊಡ್ಡಿ, ಧನಂಜಯ, ಮುದೆಪ್ಪ ದೊಡ್ಡಮನಿ, ನರಸಣ್ಣ ದೊರೆ, ಶ್ರೀಧರ ಗೌಡ ಹೀರಾ, ಅನ್ವರ ಪಾಷಾ, ಅಮರೇಶ ನಾಯಕ ಇದ್ದರು.