ಹೆಬ್ರಿ: ಹೆಬ್ರಿ ಹಾಗೂ ಕುಂದಾಪುರ ಸಂಪರ್ಕಿಸುವ ಬಹು ಬೇಡಿಕೆಯ ರಾಜ್ಯ ಹೆದ್ದಾರಿಯಲ್ಲಿ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುತ್ತಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಸೇತುವೆಗೆ ಸೋಮವಾರ ಡಾಂಬರು ಕಾಮಗಾರಿ ಪೂರ್ಣಗೊಂಡಿತು. ಸೇತುವೆಯ ಎರಡೂ ಭಾಗದಲ್ಲಿ ಸೇರಿ ಸುಮಾರು 450 ಮೀ. ಉದ್ದಕ್ಕೆ ಡಾಂಬರು ಕಾಮಗಾರಿ ಮಾಡಲಾಗಿದೆ. ಸಾರ್ವಜನಿಕರಿಗೆ ಶೀಘ್ರ ಉಪಯೋಗಕ್ಕೆ ಲಭ್ಯವಾಗಲಿದೆ.