ಕಾರವಾರ: ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾರ ಗುಡ್ಡ ಗ್ರಾಮಕ್ಕೆ ರಸ್ತೆ ಸಂರ್ಪ ಸರಿಪಡಿಸುವಂತೆ ಗ್ರಾಮಸ್ಥರು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಹೆಬ್ಬಾರ ಗುಡ್ಡದಲ್ಲಿ 25 ರಷ್ಟು ಮನೆಗಳಿದ್ದು, 200 ರಷ್ಟು ಜನಸಂಖ್ಯೆ ಇದೆ. ಎತ್ತರದ ಗುಡ್ಡದ ಮೇಲೆ ಅರಣ್ಯದ ನಡುವೆ ಗ್ರಾಮವಿದ್ದು, ಮಣ್ಣಿ ಕಚ್ಚಾ ರಸ್ತೆಯಲ್ಲಿ ಗ್ರಾಮಕ್ಕೆ ತೆರಳಲು ಕಷ್ಟವಾಗುತ್ತಿದೆ. 2023 ರಲ್ಲಿ ಗ್ರಾಮಕ್ಕೆ 5 ಕಿಮೀ ರಸ್ತೆ ಮಂಜೂರಾಗಿತ್ತು. ಆದರೆ, ಕಾಮಗಾರಿ ಪ್ರಾರಂಭವಾಗಿ ಅರ್ಧಕ್ಕೇ ನಿಂತಿದೆ. ರಸ್ತೆ ಜತೆ ಚರಂಡಿ, ಸಿಡಿ ನಿರ್ಮಿಸಿಲ್ಲ. ಪಿಡಬ್ಲುಡಿ ಕಾಮಗಾರಿ ಕೈಗೊಂಡಿದ್ದು, ಆ ಇಲಾಖೆಯ ಇಂಜಿನಿಯರ್‌ಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಕಾರವಾರದವರೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದಲ್ಲಿ ಗ್ರಾಮದ ಸಂರ್ಪರ್ಕ ಕಡಿತವಾಗುತ್ತದೆ. ವಿದ್ಯುತ್ ಕಂಬಗಳು ಮುರಿದು ಬಿದ್ದರೆ ಅದರ ರಿಪೇರಿ ಮಾಡುವುದಿಲ್ಲ. ಅನಾರೋಗ್ಯಕ್ಕೊಳಗಾದರೆ, ಆಸ್ಪತ್ರೆಗೆ ಸಾಗಿಸಲು ಕಷ್ಟವಾಗುತ್ತದೆ ಎಂದು ತಮ್ಮ ಗೋಳು ತೋಡಿಕೊಂಡರು. ವಾರದಲ್ಲಿ ರಸ್ತೆ ಕಾಮಗಾರಿ ಪುನರಾರಂಭಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಗ್ರಾಮಸ್ಥರಾದ ಶೇಷ ಗಾಂವಕರ್,ಛಾಯಾ ಗಾಂವಕರ್,ದಯಾನಂದ ಸಿದ್ದಿ, ನಾಗರಾಜ ಬಾಂದಿ, ಇತರರು ಇದ್ದರು.