ಜಿಲ್ಲೆ

ಹೆಬಸೂರ ಶಾಲೆಯಲ್ಲಿ ಸಸ್ಯ ಶಾಮಲ

Dharwada - Basavaraj Idli

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಸಸ್ಯ ಶಾಮಲ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಿ.ಆರ್.ಪಿ. ದುರ್ಗೇಶ ಮಾದರ ಇವರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನ, ಪ್ರಧಾನ ಗುರು ಲತಾ ಗ್ರಾಮಪುರೋಹಿತ, ಶಾರದಾ ಕಂಬಳಿ, ಸುವರ್ಣ ಮಡಿವಾಳರ, ದಾಕ್ಷಾಯಿಣಿ ಕೊರಗರ, ಸುಧಾ ಕೊಣ್ಣೂರ, ದೇವೇಂದ್ರ ಪತ್ತಾರ, ಗೀತಾ ಕೆಂಚರಡ್ಡಿ ಉಪಸ್ಥಿತರಿದ್ದರು.

ಮನೆಗೊಂದು ಮರ ಊರಿಗೊಂದು ವನ ಎನ್ನುವಂತೆ ಶುದ್ಧ ಪರಿಸರಕ್ಕಾಗಿ ಶಾಲೆಯ 250 ವಿದ್ಯಾರ್ಥಿಗಳು ತಮ್ಮ ತಮ್ಮ ಮನೆ ಅಂಗಳ ಹಿತ್ತಲಗಳಲ್ಲಿ ಒಂದೊಂದು ಸಸಿ ನೆಡಲು ಅಶೋಕ ಸಜ್ಜನ ಪಾಲಕರು, ವಿದ್ಯಾರ್ಥಿಗಳಲ್ಲಿ ಕೋರಿದರು.