Heavy wind and rain cause extensive damage 
ಜಿಲ್ಲೆ

ಭಾರಿ ಗಾಳಿ-ಮಳೆಗೆ ಅಪಾರ ಹಾನಿ

Vijayapura - Desk - Doddanagouda Gudihindin

ಇಳಕಲ್ಲ(ಗ್ರಾ): ಪಟ್ಟಣದಲ್ಲಿ ಗುರುವಾರ ಮತ್ತು ಶುಕ್ರವಾರ ಸಂಜೆ ಭಾರಿ ಗಾಳಿ-ಮಳೆಗೆ ಅಲ್ಲಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದಿವೆ. ಮುರ್ತುಜಾ ಖಾದ್ರಿ ದರ್ಗಾ ಹತ್ತಿರ ಒತ್ತು ಬಂಡಿಗಳಲ್ಲಿನ ವಸ್ತುಗಳು ರಸ್ತೆ ತುಂಬ ಹರಡಿದವು.

ಗೌಳೇರಗುಡಿ ನವನಗರ ಭಾಗದಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಭಾರಿ ಗಾಳಿಗೆ ಶೆಡ್ ಮೇಲಿನ ಪತ್ರಾಸ್ ಹಾರಿ ಹೋಗಿವೆ. ಅಲ್ಲಲ್ಲಿ ಮರಗಳು ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.