ಬೆಂಗಳೂರು: ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಪೀಣ್ಯ ಮೇಲ್ಸೇತುವೆಗೆ ಹಿಡಿದಿದ್ದ ಗ್ರಹಣಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಸನಿಹವಾಗಿದೆ. ಶೀಘ್ರವೇ ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ದೊರೆಯಲಿದೆ.
ಡಿಸೆಂಬರ್ ವೇಳೆಗೆ ಎಲ್ಲ ಕೇಬಲ್‌ಗಳ ಅಳವಡಿಕೆ ಪೂರ್ಣಗೊಳ್ಳಲಿದ್ದು, ಜನವರಿಗೆ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಗ್ರೀಲ್ ಸಿಗ್ನಲ್ ದೊರೆಯಲಿದೆ.
೧೨೦ ಪಿಲ್ಲರ್ (ಸ್ಪಾೃನ್) ನಡುವೆ ಖಾಲಿ ಇದ್ದ ಜಾಗದಲ್ಲಿ ಹೊಸದಾಗಿ ೨೪೦ ಕೇಬಲ್ ಅಳವಡಿಸುವ ಕಾರ್ಯ ಈಗಾಗಲೇ ಅರ್ಧ ಮುಗಿದಿದ್ದು, ಡಿಸೆಂಬರ್ ವೇಳೆಗೆ ಎಲ್ಲ ಕೇಬಲ್‌ಗಳ ಅಳವಡಿಕೆ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಭಾರೀ ವಾಹನಗಳು ಸೇರಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೂ ಅವಕಾಶ ಸಿಗಲಿದೆ. ಪೀಣ್ಯ ಭಾಗದಲ್ಲಿ ಬರುವ ಈ ಮೇಲ್ಸೇತುವೆ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯದಿಂದ ಪಾರ್ಲೆಜಿ ್ಯಾಕ್ಟರಿವರೆಗೂ ೫ ಕಿ.ಮೀ. ಉದ್ದವಿದ್ದು ರಾಜ್ಯದ ೨೦ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಅಷ್ಟೇ ಅಲ್ಲ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ. ೮ನೇ ಮೈಲಿ ಜಂಕ್ಷನ್ ಸಮೀಪ ೧೦೨ ಮತ್ತು ೧೦೩ನೇ ಪಿಲ್ಲರ್ ನಡುವಿನ ೩ ಕೇಬಲ್ ಬಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ೨೦೨೧ರ ಡಿ.೨೫ ರಂದು ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ನಿಷೇಧಿಸಿತ್ತು. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ತಜ್ಞರು ಪರಿಶೀಲನೆ ನಡೆಸಿ ಹೆಚ್ಚು ಟೈರ್ ಹೊಂದಿರುವ ಭಾರೀ ವಾಹನಗಳು (ಮಲ್ಟಿ ವ್ಹೀಲ್ ವೆಹಿಕಲ್ಸ್) ಸಂಚರಿಸಿದ್ದರಿಂದ ಕೇಬಲ್‌ಗಳು ಬಾಗಿವೆ ಎಂದು ವರದಿ ನೀಡಿದ್ದರು. ಬಳಿಕ ೨೦೨೨ ರ ೧೬ ೆಬ್ರವರಿ ಲಘು ವಾಹ ಗಳಿಗೆ ಮಾತ್ರ ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿತ್ತು. ಬಳಿಕ ಐಐಎಸ್ಸಿಯ ತಜ್ಞ ಡಾ.ಚಂದ್ರ ಕಿಶನ್ ನೇತೃತ್ವದ ತಂಡವು, ಮೇಲ್ಸೇತುವೆಯ ಕ್ಷಮತೆ ಬಗ್ಗೆ ಲೋಡ್ ಟೆಸ್ಟ್, ಕೆಮಿಕಲ್ ಅನಾಲಿಸಿಸ್ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿ ಎನ್‌ಎಚ್ ಎಐಗೆ ಮಧ್ಯಂತರ ವರದಿ ನೀಡಿತ್ತು.
ಹೊಸ ಕೇಬಲ್ ಅಳವಡಿಕೆ:
ಸುದೀರ್ಘ ಅಧ್ಯಯನ ನಡೆಸಿ ಅಂತಿಮ ವರದಿ ನೀಡಲು ಐಐಎಸ್ಸಿಯ ಚಂದ್ರ ಕಿಶನ್, ದೆಹಲಿಯ ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಿವೃತ್ತ ವಿಜ್ಞಾನಿ ಡಾ. ಶರ್ಮಾ, ಟ್ಯಾಂಡನ್ ಕನ್ಸಲ್ಟೆನ್ಸಿಯ ಬ್ರಿಡ್ಜ್ ಎಂಜಿನಿಯರ್ ದೆಹಲಿಯ ಡಾ.ಮಹೇಶ್ ಟ್ಯಾಂಡನ್ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು. ‘ಭಾರೀ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮುಕ್ತ ಮಾಡಬಹುದು’ ಎಂದು ಸಮಿತಿ ವರದಿ ನೀಡಿತ್ತು. ಆದರೆ ಇದರ ಅನುಷ್ಠಾನ ಕಷ್ಟಕರವಾಗಿದ್ದರಿಂದ ಪರ್ಯಾಯ ಮಾರ್ಗ ಕಂಡುಹಿಡಿಯುವಂತೆ ಕೋರಲಾಗಿತ್ತು. ಆಗ ನೂತನ ಕೇಬಲ್ ಅಳವಡಿಕೆ, ಇರುವ ಕೇಬಲ್‌ಗಳ ಬದಲಾವಣೆ ಮಾಡುವಂತೆ ವರದಿ ನೀಡಿದ್ದರಿಂದ ಅದರಂತೆ ಹೊಸ ಕೇಬಲ್ ಅಳವಡಿಸಲಾಗುತ್ತಿದೆ.
ಪೀಣ್ಯ ಮೇಲ್ಸೇತುವೆಯಲ್ಲಿ ಒಟ್ಟು ೧೨೦ ಸ್ಲಾೃನ್ (ಪಿಲ್ಲರ್) ಇವೆ. ಎರಡು ಪಿಲ್ಲರ್‌ಗಳ ನಡುವೆ ತಲಾ ೧೦ ರಂತೆ ಒಟ್ಟಾರೆ ೧೨೦೦ ಕೇಬಲ್‌ಗಳಿವೆ. ಮುಂಜಾಗ್ರತಾ ಕ್ರಮವಾಗಿ ಎರಡು ಪಿಲ್ಲರ್‌ಗಳ ನಡುವೆ ಹೊಸದಾಗಿ ಇನ್ನೂ ಎರಡು ಕೇಬಲ್‌ಗಳನ್ನು ಅಳವಡಿಸಲು ಸ್ಥಳಾವಕಾಶವಿದೆ. ಇದೀಗ ಮೊದಲನೇ ಹಂತದಲ್ಲಿ ಹೊಸದಾಗಿ ೨ ಪಿಲ್ಲರ್ ನಡುವೆ ೨ ಹೊಸ ಕೇಬಲ್‌ಗಳನ್ನು ಅಳವಡಿಸಿ ಮೇಲ್ಸೇತುವೆ ಸದೃಢಗೊಳಿಸಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದ್ದು, ಬಳಿಕ ಮೇಲ್ಸೇತುವೆಯಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ನಂತರ ಇನ್ನುಳಿದ ೧೨೦೦ ಕೇಬಲ್‌ಗಳನ್ನೂ ಒಂದೂವರೆ ವರ್ಷ ದಲ್ಲಿ ಹಂತಹಂತವಾಗಿ ಬದಲಾಯಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.