ಜಿಲ್ಲೆ

ನೌಕಾನೆಲೆಗೆ ಗುತ್ತಿಗೆ ಕಾರ್ಮಿಕರಿಗೆ ನಿರ್ಬಂಧ

Uttara Kannada - Subash Hegde
ಕಾರವಾರ: ಭಾರತ-ಪಾಕಿಸ್ತಾನ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಹಾಗೂ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಯುದ್ಧ ಸಂದರ್ಭದಲ್ಲಿ ಕದಂಬ ನೌಕಾನೆಲೆ ಮಹತ್ವದ ಪಾತ್ರ ವಹಿಸಲಿದೆ. ಹಾಗಾಗಿ ನೌಕಾನೆಲೆಯ ಒಳಗೆ ಸರ್ವ ಸಿದ್ಧತೆ ನಡೆಯುತ್ತಿದೆ. ತಾಲೀಮುಗಳು ನಡೆಯುತ್ತಿವೆ. ಇದರಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬುಧವಾರ ನೌಕಾನೆಲೆಯ ಆವರಣದ ಒಳಗೆ ಕಾಯಂ ಉದ್ಯೋಗಿಗಳನ್ನು ಬಿಟ್ಟು ಉಳಿದವರ ಪ್ರವೇಶವನ್ನು ನಿರ್ಬಂಽಸಲಾಗಿದೆ. ವಿವಿಧ ವಿಭಾಗಗಳಲ್ಲಿ ಹೊರ ಗುತ್ತಿಗೆ ಕಂಪನಿಗಳ ನೌಕರರು ನೌಕಾನೆಲೆಯ ಒಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರೊಜೆಕ್ಟರ್ ಸೀಬರ್ಡ್ 2ಎ ಕಾಮಗಾರಿಗಾಗಿ ವಿವಿಧ ಗುತ್ತಿಗೆ ಕಂಪನಿಗಳ ಕಾರ್ಮಿಕರು ದುಡಿಯುತ್ತಾರೆ. ಅವರೆಲ್ಲರಿಗೆ ನೌಕಾನೆಲೆ ಪ್ರವೇಶಕ್ಕೆ ವಿಶೇಷ ಗುರುತಿನ ಚೀಟಿ ನೀಡಲಾಗಿದೆ. ಆದರೆ, ಬುಧವಾರ ಗುರುತಿನ ಚೀಟಿ ಇರುವವರ ಪ್ರವೇಶಕ್ಕೂ ಯಾವುದೇ ಮುನ್ಸೂಚನೆ ಇಲ್ಲದೇ ನಿರ್ಬಂಧ ವಿಽಸಲಾಗಿದೆ. ಕೋಸ್ಟ್ಗಾರ್ಡ್ ಹಾಗೂ ಕರಾವಳಿ ಕಾವಲುಪಡೆಯ ಸಿಬ್ಬಂದಿಯೂ ನಿರಂತರವಾಗಿ ಗಸ್ತು ನಡೆಸಿದ್ದಾರೆ. ಅಣೆಕಟ್ಟುಗಳಿಗೆ ಹೆಚ್ಚಿನ ಭದ್ರತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳಿ, ಶರಾವತಿ ನದಿಗಳಿಗೆ ಅಣೆಕಟ್ಟೆಗಳಿದ್ದು, ಅವುಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ. ಕರ್ನಾಟಕ ಪೊಲೀಸ್ ಇಂಟರ್‌ರ್ನಲ್ ಸೆಕ್ಯುರಿಟಿ ಡಿವಿಜನ್ (ಐಎಸ್‌ಡಿ) ವಿಶೇಷ ಭದ್ರತೆಯ ಆಡಿಟ್ ಮಾಡಿದ್ದು, ಅಗತ್ಯ ಭದ್ರತೆಗಳನ್ನು ಒದಗಿಸಲಾಗಿದೆ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ. ಕಾರವಾರ ಮಾತ್ರವಲ್ಲ ಇಡೀ ಕರಾವಳಿಯಲ್ಲಿ ವಿಶೇಷ ಕಣ್ಗಾವಲು ಇರಿಸುವಂತೆ ಗೃಹ ಮಂತ್ರಾಲಯದಿAದ ಸೂಚನೆ ಬಂದಿದೆ. ಕರಾವಳಿ ಕಾವಲು ಪಡೆ ಈ ನಿಟ್ಟಿನಲ್ಲಿ ಸನ್ನದ್ಧವಾಗಿದೆ. ಬಂದರುಗಳಿಗೆ ಆಗಮಿಸುವ ವಾಣಿಜ್ಯ ಹಡಗುಗಳ ಮೇಲೆ ವಿಶೇಷ ನಿಗಾ ಇಡಲು ಸೂಚನೆ ಬಂದಿದ್ದು, ಬಂದರು ಅಽಕಾರಿಗಳಿಗೆ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ. ಎಂ.ನಾರಾಯಣ ಎಸ್‌ಪಿ ಉತ್ತರ ಕನ್ನಡ .......