ಬಳ್ಳಾರಿ : ನಗರ ಸೇರಿದಂತೆ ಜಿಲ್ಲೆಯ ವಿವಿಧಡೆ ಸಿಡಿಲು -ಗುಡುಗು ಸಹಿತ ಮಂಗಳವಾರ ಜೋರು ಮಳೆ ಸುರಿಯತು. ಬೆಳಗ್ಗೆಯಿಂದ ಮೋಡ ಕವಿದ ವಾತವರಣದಿಂದ ಕೂಡಿತ್ತು. ಮಧ್ಯಾಹ್ನ ದಿಢೀರ್ ಮಳೆ ಸುರಿಯಿತು.
ನಗರದ ಸುಧಾ ಕ್ರಾಸ್, ದುರ್ಗಮ್ಮ ಗುಡಿ, ಸಂಗಮ್ ವೃತ್ತ , ಕೌಲಬಜಾರ್, ಬೆಳಗಲ್ ಕ್ರಾಸ್, ರೇಡಿಯೊ ಪಾರ್ಕ್ ಸೇರಿದಂತೆ ಬಹುತೇಕ ಕಡೆ ಧಾರಾಕಾರ ಮಳೆ ಸುರಿಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಬೀದಿಬದಿ ವ್ಯಾಪಾರಕ್ಕೆ ಪೆಟ್ಟು ಬಿದ್ದಿತ್ತು. ವಿವಿಧ ಕೆಲ ಕಾರ್ಯಗಳಿಗೆ ತೆರಳುತ್ತಿದ್ದ ಸಾರ್ವಜನಿಕರಿಗೆ ಮಳೆ ಕಿರಿಕಿರಿ ಉಂಟು ಮಾಡಿತು. ರಸ್ತೆಗುಂಡಿಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತದ್ದು ಸಾಮಾನ್ಯವಾಗಿತ್ತು. ಕೆಲವಡೆ ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲದೆ ರಸ್ತೆಗಳು ಕಾಲುವೆಯಂತಾದವು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲವು ವಾಹನ ಸವಾರರು ಮಳೆಯಲ್ಲೇ ಚಲಾಯಿಸಿಕೊಂಡು ಕಂಡು ಬಂತು. ಮಳೆ ಹೆಚ್ಚಾದ ಕಾರಣ ಶಾಲಾ ಕಾಲೇಜು ಮಕ್ಕಳು ಮನೆ ಹೋಗಲು ಪರದಾಡಿದರು. ಗ್ರಾಮೀಣ ಪ್ರದೇಶದಲ್ಲಿ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಮಳೆಯಿಂದ ನಾನಾ ಬೆಳೆಗಳ ನಾಟಿ - ಬಿಳಿ ಜೋಳ ಬಿತ್ತನೆ ಕೆಲಸವನ್ನು ಗರಿಗೆದರಿಲಿದೆ.