ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಬುಧವಾರ ತಡರಾತ್ರಿಯಿಂದ ಗುರುವಾರ ಬೆಳಗ್ಗೆಯಿಂದ ಗುಡುಗು ಸಹಿತ ಮಳೆ ಸುರಿದು ರಾಷ್ಟ್ರೀಯ ಹೆದ್ದಾರಿ ತುಂಬೆಲ್ಲ ಮಳೆ ನೀರು ಹರಿದು ಜನ ಜೀವನ ಅಸ್ತವ್ಯಸ್ತವಾಯಿತು.
ನಗರದ ಆಶಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಚರಂಡಿ ಸ್ವಚ್ಛತೆ ಮಾಡದಿರುವ ಹಿನ್ನೆಲೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ನಿಂತು ಕೆರೆಯಂತೆಯಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವ ಪರಸ್ಥಿತಿ ನಿರ್ಮಾಣವಾಗಿತ್ತು.
ಮಳೆಯಲ್ಲಿ ಬಿರುಗಾಳಿ ಅರ್ಭಟ ಜೋರಾಗಿತ್ತು. ನಗರದ ಚಂದ್ರವೌಳೇಶ್ವರ ವೃತ್ತ, ಪಟೇಲ್ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಚರಂಡಿ ನೀರು ಹರಿದು ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಕಳೆದ 24 ಗಂಟೆಯಲ್ಲಿ 190.3 ಮಿ,ಮೀ ಮಳೆಯಾಗಿದೆ.
ಈ ಪೈಕಿ ದೇವದುರ್ಗದಲ್ಲಿ 181.9 ಮೀ.ಮಿ,ಲಿಂಗಸೂಗೂರಿನಲ್ಲಿ 194.8 ಮೀ.ಮಿ,ಮಾನ್ವಿಯಲ್ಲಿ 184 ಮೀ.ಮಿ,ರಾಯಚೂರು 125.5 ಮೀ.ಮಿ,ಸಿಂಧನೂರು 199.5 ಮೀ.ಮಿ,ಮಸ್ಕಿ 260.8 ಮೀ.ಮಿ ಮತ್ತು ಸಿರವಾರದಲ್ಲಿ 218.1 ಮೀ.ಮೀ ಮಳೆಯಾಗಿದೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.