ಜಿಲ್ಲೆ

ಭರಮಸಾಗರದಲ್ಲಿ ಭಾರಿ ಮಳೆಗೆ ಎರಡು ಮನೆಗಳು ಕುಸಿತ: ಇಬ್ಬರು ಮಕ್ಕಳಿಗೆ ಗಂಭೀರ ಗಾಯ

Chitradurga

ಭರಮಸಾಗರ: ಶನಿವಾರ ರಾತ್ರಿ ಸುರಿದ ಮಳೆಗೆ ಹೋಬಳಿ ವ್ಯಾಪ್ತಿಯಲ್ಲಿ ಎರಡು ಮನೆ ಕುಸಿದಿದ್ದು, 11 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಮದ ಜಟ್‌ಪಟ್ ನಗರದ ನಿವಾಸಿ ನೀಲಾಬಾಯಿ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ಕುಟುಂಬದ 6 ಜನರು ಗಾಯಗೊಂಡಿದ್ದಾರೆ. ಆಹಾರ ಧಾನ್ಯ, ಗೃಹಬಳಕೆ ವಸ್ತುಗಳು ಸಂಪೂರ್ಣ ಹಾಳಾಗಿವೆ.

ಭಾನುವಾರ ರಜೆ ಇದ್ದ ಕಾರಣ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಸುಳಿಯಲಿಲ್ಲ. ತಕ್ಷಣ ಕ್ರಮವಹಿಸಿ ವಾಸಿಸಲು ವ್ಯವಸ್ಥೆ ಮಾಡಬೇಕೆಂದು ನೊಂದ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.

ಗೊಲ್ಲರಹಳ್ಳಿಯ ನಾಗರಾಜಪ್ಪ ಎಂಬುವರಿಗೆ ಸೇರಿದ ಮನೆ ರಾತ್ರಿ ಕುಸಿದಿದ್ದು, ಐವರು ಅವಶೇಷಗಳಡಿ ಸಿಲುಕಿಕೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.