ಜಿಲ್ಲೆ

ಮಂಡ್ಯದಲ್ಲಿ ದಿನವಿಡೀ ಸುರಿದ ಮಳೆ: ಮುಂದುವರೆದ ವರುಣನ ಅವಾಂತರ

reportermys

ಮಂಡ್ಯ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಗುರುವಾರ ದಿನವಿಡೀ ಜೋರು ಮಳೆಯಾಯಿತು.
ಜೋರು ಮಳೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ತೆರಳುವ ವಾಹನಗಳನ್ನು ಮಾರ್ಗವನ್ನು ಕೆ.ಎಂ.ದೊಡ್ಡಿ ಮೂಲಕವೇ ಕಳುಹಿಸಲಾಯಿತು. ಇನ್ನು ಹೊಸಬೂದನೂರು ಸಮೀಪ ಸ್ಥಗಿತಗೊಂಡಿದ್ದ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇತ್ತ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣದಲ್ಲಿಯೂ ಏರಿಕೆಯಾಗಿದೆ. ಗುರುವಾರ 67,712 ಕ್ಯೂಸೆಕ್ ಒಳಹರಿವಿತ್ತು. ಈ ಹಿನ್ನೆಲೆಯಲ್ಲಿ 81,112 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಪರಿಣಾಮ ನದಿಪಾತ್ರದ ಗಣಪತಿ, ಚಂದ್ರಮೌಳೇಶ್ವರ ಮತ್ತು ಅಷ್ಟಮಾತೆಯರ ದೇವಾಲಯ, ಪ್ರವಾಸಿ ತಾಣಗಳು ಜಲಾವೃತಗೊಂಡಿದೆ. ಆದ್ದರಿಂದ ನದಿಪಾತ್ರಕ್ಕೆ ತೆರಳದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಇನ್ನು ಮುನ್ನೆಚ್ಚೆರಿಕಾ ಕ್ರಮವಾಗಿ ಜಿಲ್ಲೆಯ ಏಳು ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.