ಜಿಲ್ಲೆ

ಮೈಸೂರಿನಲ್ಲಿ ಮೇ 21 ರಿಂದ ಐದು ದಿನ ಭಾರಿ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

ಮೈಸೂರು: ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಸುರಿಯುತ್ತಿದ್ದು, ಈ ಮಳೆಯ ಆರ್ಭಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೇ 21 ರಿಂದ 25ರವರೆಗೆ ಭಾರಿ ಮಳೆಯಾಗಲಿದೆ. ಈ ಅವಧಿಯಲ್ಲಿ ಕನಿಷ್ಠ 20 ರಿಂದ 22, ಗರಿಷ್ಠ 29 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮೇ 21 ರಂದು 65 ಮಿ.ಮೀ., 22 ರಂದು 14 ಮಿ.ಮೀ., 23 ರಂದು 12 ಮಿ.ಮೀ., 24 ರಂದು 10 ಮಿ.ಮೀ., 25 ರಂದು 14 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಅಧೀಕ್ಷಕ ಡಾ.ಸಿ.ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಲೂಕುವಾರು ವಿವರ: ಎಚ್.ಡಿ.ಕೋಟೆ ತಾಲೂಕಿನಲ್ಲಿ ಮೇ 21 ರಂದು 17.6 ಮಿ.ಮೀ., 22 ರಂದು 0.6 ಮಿ.ಮೀ., 23 ರಂದು 0.8 ಮಿ.ಮೀ., 24 ರಂದು 8 ಮಿ.ಮೀ., 25 ರಂದು 33.1 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಹುಣಸೂರಿನಲ್ಲಿ ಮೇ 21 ರಂದು 13.4 ಮಿ.ಮೀ., 22 ರಂದು 0.6 ಮಿ.ಮೀ., 23 ರಂದು 0.6 ಮಿ.ಮೀ., 24 ರಂದು 5.6 ಮಿ.ಮೀ., 25 ರಂದು 20.6 ಮಿ.ಮೀ., ಕೆ.ಆರ್. ನಗರದಲ್ಲಿ ಮೇ 21 ರಂದು 7.9 ಮಿ.ಮೀ., 22 ರಂದು 1.4 ಮಿ.ಮೀ., 23 ರಂದು 0.6 ಮಿ.ಮೀ., 24 ರಂದು 3 ಮಿ.ಮೀ., 25 ರಂದು 14.2 ಮಿ.ಮೀ., ಮೈಸೂರಿನಲ್ಲಿ ಮೇ 21 ರಂದು 8.2 ಮಿ.ಮೀ., 22 ರಂದು 0.6 ಮಿ.ಮೀ., 23 ರಂದು 0.4 ಮಿ.ಮೀ., 24 ರಂದು 2.5 ಮಿ.ಮೀ., 25 ರಂದು 12.8ಮಿ.ಮೀ., ನಂಜನಗೂಡಿನಲ್ಲಿ ಮೇ 21 ರಂದು 8.3 ಮಿ.ಮೀ., 22 ರಂದು 0.4 ಮಿ.ಮೀ., 23 ರಂದು 0.2 ಮಿ.ಮೀ., 24 ರಂದು 3.4 ಮಿ.ಮೀ., 25 ರಂದು 17.6 ಮಿ.ಮೀ., ಪಿರಿಯಾಪಟ್ಟಣದಲ್ಲಿ ಮೇ 21 ರಂದು 17.2 ಮಿ.ಮೀ., 22 ರಂದು 1.3. ಮಿ.ಮೀ., 23 ರಂದು 1.6 ಮಿ.ಮಿ., 24 ರಂದು 9.3. ಮಿ.ಮೀ., 25 ರಂದು 29.4 ಮಿ.ಮೀ., ತಿ.ನರಸೀಪುರದಲ್ಲಿ ಮೇ 21 ರಂದು 9.7 ಮಿ.ಮೀ., 22 ರಂದು 0.2 ಮಿ.ಮೀ., 23 ರಂದು 0.2 ಮಿ.ಮೀ., 24 ರಂದು 1.4 ಮಿ.ಮೀ., 25 ರಂದು 8 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ.