ಯಲ್ಲಾಪುರ: ತಾಲೂಕಿನಲ್ಲಿ ಭಾನುವಾರ ಮಳೆ ಮತ್ತೆ ಚುರುಕುಗೊಂಡಿದ್ದು, ಬಿಟ್ಟು ಬಿಟ್ಟು ಜೋರಾಗಿ ಮಳೆ ಸುರಿಯಿತು.
ಜೋರಾದ ಮಳೆ, ಗಾಳಿಯಿಂದ ಬೆಲ್ ರಸ್ತೆಯಲ್ಲಿ ನಡೆಯುವ ವಾರದ ಸಂತೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರು ಪರದಾಡುವಂತಾಯಿತು. ಗಟಾರ್ದ ನೀರು ತುಂಬಿ ರಸ್ತೆಯ ಮೇಲಿನ ತರಕಾರಿ ಅಂಗಡಿಗಳತ್ತ ನುಗ್ಗಿ ಸಮಸ್ಯೆ ಉಂಟು ಮಾಡಿತು.
ಗ್ರಾಮೀಣ ಭಾಗದ ಹಲವೆಡೆ ವಿದ್ಯುತ್ ವ್ಯತ್ಯಯ ಮುಂದುವರಿದಿದ್ದು, ಮಳೆ- ಗಾಳಿಗೆ ತುಂಡಾಗಿ ಬೀಳುವ ವಿದ್ಯುತ್ ಕಂಬ, ಲೈನ್ಗಳನ್ನು ಸರಿಪಡಿಸಲು ಹೆಸ್ಕಾಂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಮಾಗೋಡ ಸಮೀಪ ಮೊಟ್ಟೆಗದ್ದೆ ಕ್ರಾಸ್ ಬಳಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು, ಲೈನ್ ಹಾಗೂ ಕಂಬ ಮುರಿದು ಬಿದ್ದಿದೆ. ಸ್ಥಳೀಯರು ಮರವನ್ನು ತೆರವುಗೊಳಿಸಿದರು.