ರಾಯಚೂರು ತಾಲೂಕಿನ ಶಕ್ತಿನಗರದಲ್ಲಿನ ದತ್ತಾತ್ರೇಯ ದೇವಸ್ಥಾನದಲ್ಲಿನ ಆವರಣದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಭಾನುವಾರ ಸಂಜೆ ಬೆಂಕಿ ಹತ್ತಿರುವುದು. 
ಜಿಲ್ಲೆ

ನಗರದಲ್ಲಿ ಧಾರಾಕಾರ ಮಳೆ

ರಾಚಯ್ಯ ಸ್ವಾಮಿ

ರಾಯಚೂರು: ನಗರದಲ್ಲಿ ಸಿಡಿಲು, ಬಿರುಗಾಳಿಯೊಂದಿಗೆ ಭಾನುವಾರ ಸಂಜೆ ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ಮರ ಉರುಳಿ ಬಿದ್ದಿದ್ದು, ತಾಲೂಕಿನ ಶಕ್ತಿನಗರದಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹತ್ತಿದ ಘಟನೆ ಜರುಗಿದೆ.
ಏಕಾಏಕಿ ಸಂಜೆ 5.30ರ ಸುಮಾರಿಗೆ ಆರಂಭವಾದ ಮಳೆ 6.30ರವರೆಗೆ ಧಾರಾಕಾರವಾಗಿ ಸುರಿದಿದ್ದು, ಜತೆಗೆ ಗುಡುಗು, ಸಿಡಿಲನ ಅರ್ಭಟ ಜೋರಾಗಿತ್ತು. ಶಕ್ತಿನಗರದ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ.
ನಗರದ ಎಂ.ಈರಣ್ಣ ವೃತ್ತದಲ್ಲಿ ಮರ ಉರುಳಿ ಬಿದ್ದಿದ್ದು, ಚಂದ್ರವೌಳೇಶ್ವರ ವೃತ್ತ, ಪಟೇಲ್ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಚರಂಡಿ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುವ ಆತಂಖ ಎದುರಾಗಿತ್ತು. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಳೆ ಮುಂದುವರಿಯುವ ಸಾಧ್ಯತೆಗಳು ಕಂಡು ಬರುತ್ತಿವೆ.