ಜಿಲ್ಲೆ

ನೆಲಮಂಗಲದಲ್ಲಿ ಸಿಡಿಲು ಬಡಿದು ಇಬ್ಬರಿಗೆ ಗಂಭೀರ ಗಾಯ, ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು

vinaymk1969

ಬೆಂಗಳೂರು: ಇಲ್ಲಿಗೆ ಸಮೀಪದ ನೆಲಮಂಗಲದಲ್ಲಿ ಸೋಮವಾರ ಸಂಜೆ ಭಾರಿ ಮಳೆ ಸುರಿಯಿತು. ಸಿಡಿಲಿನ ಆರ್ಭಟಕ್ಕೆ ಸಿಲುಕಿದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅರ್ಫಾನ್​ (18) ಮತ್ತು ಸಕ್ಲೈನ್​ (16) ಗಾಯಗೊಂಡವರು. ಆಟವಾಡಲು ಹೋದ ಸಂದರ್ಭದಲ್ಲಿ ಭಾರಿ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಇವರು ಬಂಡೆಯ ಆಶ್ರಯ ಪಡೆದುಕೊಂಡಿದ್ದರು.

ದುರದೃಷ್ಟವಶಾತ್​ ಆ ಬಂಡೆಗೆ ಸಿಡಿಲು ಅಪ್ಪಳಿಸಿದ್ದರಿಂದ ಇಬ್ಬರು ಗಾಯಗೊಂಡರು ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.