ಜಿಲ್ಲೆ

ಕೊಡಗಿನಲ್ಲಿ ಭಾರೀ ಮಳೆ,ಬಿರುಗಾಳಿಗೆ ಹಾರಿಹೊದ ಮನೆಯ ಮೇಲ್ಛಾವಣಿ, ಕುಸಿದ ಮನೆ ಗೋಡೆ

mahalakshmihm

ಕೊಡಗು: ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿಯೇ ಹಾರಿಹೋಗಿದ್ದು, ಮನೆಯ ಗೋಡೆ ಕುಸಿದಿದೆ.

ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಮನೆಯ ಮೇಲ್ಚಾವಣಿಯ ಸೀಟುಗಳು ಹಾರಿ‌ ಹೋಗಿದೆ. ಇದರಿಂದ ಮಳೆಯ ನೀರೆಲ್ಲ ಮನೆಯೊಳಗೆ ನುಗ್ಗಿ ವಸ್ತುಗಳಿಗೆ ಹಾನಿಯಾಗಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯೊಳಗೆ ಮಳೆನೀರು ಬೀಳದಂತೆ ಸ್ಥಳೀಯರ ಸಹಾಯದಿಂದ ತಾತ್ಕಾಲಿಕವಾಗಿ ಟಾರ್ಪಾಲ್ ಹೊದಿಕೆ ಹಾಕಲಾಗಿದೆ. ಇನ್ನೂ ಮಡಿಕೇರಿ ಸಮೀಪದ ಹಾಕತ್ತೂರು ಭಾಗದಲ್ಲೂ ಕೂಡ ಗಾಳಿ ಮಳೆಯಾಗಿದ್ದು ಭಾರಿ ಗಾಳಿಯ ರಭಸಕ್ಕೆ ಮರವೊಂದು ರಜೀಶ್ ಎಂಬುವರ ಮನೆಯ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೂರ್ನಾಡು ,ಕುಶಾಲನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ.ಕಳೆದ ಒಂದು ವಾರದಿಂದ ಗುಡುಗುಸಹಿತ ಮಳೆಯಾಗುತ್ತಿದೆ.