ಚಿಕ್ಕಮಗಳೂರು ಉಪ್ಪಳ್ಳಿ ಬಡಾವಣೆಯಲ್ಲಿ ಧಾರಾಕಾರ ಮಳೆಯಿಂದಾಗಿ ಮನೆಗಳ ಒಳಗೆ ನುಗ್ಗಿರುವ ಮಳೆ ನೀರು. 
ಜಿಲ್ಲೆ

ಕಾಫಿನಾಡಿನಲ್ಲಿ ಧಾರಾಕಾರ ಮಳೆ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ಸುರಿದ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಮನೆಗಳ ಒಳಗೆ ಮಳೆ ನೀರು ನುಗ್ಗಿದ ಪರಿಣಾಮ ಮನೆಯಿಂದ ನೀರನ್ನು ಹೊರಹಾಕಲು ಜನ ಪರದಾಡುವಂತಾಗಿತ್ತು.

ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಆರಂಭಗೊAಡ ಮಳೆ ಸಂಜೆ ಆರುಗಂಟೆವರೆಗೆ ನಿರಂತರವಾಗಿ ಒಂದೇ ಸಮನೆ ಸುರಿದಿದ್ದರಿಂದಾಗಿ ರಸ್ತೆಗಳ ಮೇಲೆ ಮಳೆ ನೀರು ನದಿಯಂತೆ ಹರಿಯುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಇದೇ ಕಾರಣದಿಂದಲೇ ಉಪ್ಪಳ್ಳಿಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು.
ಒಂದೇ ಸಮನೆ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದರಿAದ ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯಲಾರಂಭಿಸಿತ್ತು. ಮತ್ತೆ ಮಳೆ ಹೆಚ್ಚಾಗಿದ್ದರಿಂದಾಗಿ ನೀರು ನೇರವಾಗಿ ಮನೆಗಳ ಒಳಗೇ ನುಗ್ಗಲಾರಂಭಿಸಿತ್ತು. ಇದರಿಂದಾಗಿ ಮನೆಯಲ್ಲಿದ್ದ ದಿನಸಿ ಹಾಗೂ ದಿನಬಳಕೆ ವಸ್ತುಗಳಿಗೆ ಹಾನಿಯುಂಟಾಗಿದೆ. ರಾತ್ರಿಯಾದರೂ ಮಳೆ ನೀರನ್ನು ಮನೆಯಿಂದ ಹೊರಹಾಕಲು ಉಪ್ಪಳ್ಳಿ ಭಾಗದ ಜನಪರದಾಡುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.