ಜಿಲ್ಲೆ

ಮುಂದಿನ 5 ದಿನ ಜಿಲ್ಲೆಯಲ್ಲಿ ಭಾರಿ ಮಳೆ ಸಾಧ್ಯತೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಿಲ್ಲೆಯೆಲ್ಲೆಡೆ ಏ.29ರಿಂದ ಮೇ 3ರ ವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 2ರಂದು ಜಿಲ್ಲೆಯೆಲ್ಲೆಡೆ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಚಿಕ್ಕನಾಯಕನಹಳ್ಳಿ 99.1ಮಿಮೀ, ಗುಬ್ಬಿ 60.8, ಕೊರಟಗೆರೆ 40.9, ಕುಣಿಗಲ್ 29.4, ಮಧುಗಿರಿ 39.2, ಪಾವಗಡ 29.9, ಶಿರಾ 64.1, ತಿಪಟೂರು 73.4, ತುಮಕೂರು 53.1 ಹಾಗೂ ತುರುವೇಕೆರೆಯಲ್ಲಿ 65.7ಮಿ.ಮೀ., ಮಳೆಯಾಗುವ ಸಾಧ್ಯತೆಯಿದೆ.

ಲಭ್ಯವಾಗುವ ಮಳೆ ನೀರನ್ನು ಸಂಗ್ರಹಿಸಲು ಹೊಲದ ಕಾಲುವೆಗಳು ಮತ್ತು ಕೃಷಿ ಹೊಂಡಗಳನ್ನು ಸ್ವಚ್ಛಗೊಳಿಸಬೇಕಿದೆ. ಸಸ್ಯ ಸಂರಕ್ಷಣೆ ಮತ್ತು ರಾಸಾಯನಿಕ ಗೊಬ್ಬರಗಳನ್ನು ಬಳಸುವುದನ್ನು ಮುಂದೂಡಬೇಕಾಗಿದೆ.