ಜಿಲ್ಲೆ

ಉತ್ತರ ಕನ್ನಡ ಕರಾವಳಿಯ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಣೆ

Uttara Kannada - Subash Hegde

ಕಾರವಾರ:ಜಿಲ್ಲೆಯ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ, ಕಾಲೇ ಜ್ ಗಳಿಗೆ ಜುಲೈ 05 ರಂದು ರಜೆ ಘೋಷಿಸಲಾಗಿದೆ.

ಮಂಗಳವಾರ ಭಾರಿ ಮಳೆಯಿಂದ ಕಾರವಾರ, ಭಟ್ಕಳ ಸೇರಿ ವಿವಿಧೆಡೆ ನೆರೆ ಸಂಭವಿಸಿದೆ.

ಜುಲೈ 5 ರಂದು ಬೆಳಗ್ಗೆ 8.30 ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಈ ಪ್ರದೇಶದ ಶಾಲೆ, ಕಾಲೇಜ್ಗ ಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ.