ಲಕ್ಷ್ಮೇಶ್ವರ ತಾಲೂಕಿನ ಕೆಲ ಕಡೆ ಉತ್ತಮ ಮಳೆಯಾಯಿತು. 
ಜಿಲ್ಲೆ

ಲಕ್ಷ್ಮೇಶ್ವರದಲ್ಲಿ 2 ತಾಸು ಅಬ್ಬರಿಸಿದ ಮಳೆ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಚಿಂತೆಗೀಡಾಗಿದ್ದ ರೈತ ಸಮುದಾಯಕ್ಕೆ ಸೋಮವಾರ ಸಂಜೆ ಗುಡುಗು-ಸಿಡಿಲು ಸಹಿತ ಸುರಿದ ಮಳೆ ಸಂತಸ ಮೂಡಿಸಿದೆ. ಗುಡುಗು- ಸಿಡಿಲಿನ ಅಬ್ಬರಕ್ಕೆ ಜನರು ಬೆಚ್ಚಿದರು. ಪಟ್ಟಣದ ಕೆಂಚಲಾಪುರ ಓಣಿಯಲ್ಲಿ ತೆಂಗಿನ ಮರ ಸಿಡಿಲು ಬಡಿದು ಹೊತ್ತಿ ಉರಿಯಿತು. ಒಂದು ಗಂಟೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರೋಹಿಣಿ ಮಳೆ ಸಂಪೂರ್ಣ ಕೈಕೊಟ್ಟು ಮುಂಗಾರಿನ ಬಹುತೇಕ ಬಿತ್ತನೆ ಕುಂಠಿತವಾಗಿದೆ. ರೈತ ಸಮುದಾಯಕ್ಕೆ ವರುಣನ ಆಗಮನ ಖುಷಿ ತಂದಿದೆ. ಲಕ್ಷ್ಮೇಶ್ವರ, ಆದ್ರಳ್ಳಿ, ಬಟ್ಟೂರ, ಬಡ್ನಿ, ಕುಂದ್ರಳ್ಳಿ, ಗೊಜನೂರ, ರಾಮಗೇರಿ, ಶಿಗ್ಲಿ, ಅಕ್ಕಿಗುಂದ, ಅಡರಕಟ್ಟಿ, ಮಂಜಲಾಪುರ ಮತ್ತಿತರರ ಕಡೆ ಸಂಜೆ 6ಗಂಟೆಗೆ ಪ್ರಾರಂಭವಾದ ಮಳೆ 2 ಗಂಟೆ ಸುರಿಯಿತು.