ತರೀಕೆರೆ ತಾಲೂಕಿನ ಪಿರಮೇನಹಳ್ಳಿ ಗ್ರಾಮದಲ್ಲಿ ಮಳೆ ನೀರು ರಸ್ತೆ ಮೇಲೆ ನಿಂತಿರುವುದು.  
ಜಿಲ್ಲೆ

ಕಪ್ಪೆ ಸೇವೆ ಬೆನ್ನಲ್ಲೇ ಭರ್ಜರಿ ಮಳೆ

Shivamogga - Desk - Vinayakumar D B

ತರೀಕೆರೆ: ಬರದಿಂದ ಕಂಗೆಟ್ಟಿದ್ದ ತಾಲೂಕಿನ ಪಿರಮೇನಹಳ್ಳಿ ಗ್ರಾಮಸ್ಥರು ಭಾನುವಾರ ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಸೇವೆ ಮಾಡಿದ ರಾತ್ರಿಯೇ ಕಾಕತಾಳೀಯವೆಂಬಂತೆ ಗ್ರಾಮದಲ್ಲಿ ಉತ್ತಮ ವರ್ಷಧಾರೆಯಾಗಿದೆ.

ದೇವರಿಗೆ ಪೂಜೆ ಸಲ್ಲಿಸಿ ಸಂಜೆ ಪ್ರಸಾದ ವಿನಿಯೋಗ ಮಾಡುತ್ತಿದ್ದಾಗಲೇ ಮೋಡ ಕವಿದು ಮಳೆಯ ಮುನ್ಸೂಚನೆ ನೀಡಿತ್ತು. ಪಿರಮೇನಹಳ್ಳಿ, ಕಟ್ಟೇಹೊಳೆ, ಬೇಲೇನಹಳ್ಳಿ ತಾಂಡ, ಲಕ್ಕೇನಹಳ್ಳಿ, ಎ ಮತ್ತು ಬಿ.ರಾಮನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ತಡರಾತ್ರಿ 11.50ರ ಹೊತ್ತಿಗೆ ಗುಡುಗು-ಸಿಡಿಲು ಸಹಿತ ಆರಂಭವಾದ ಮಳೆ ಮುಂಜಾನೆ 3ರವರೆಗೆ ಸುರಿಯಿತು. ಈ ಮೂಲಕ ಬಿಸಿಲಿನ ತಾಪದಿಂದ ಬವಳಿದಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿತು.