ಯಲ್ಲಾಪುರ ತಾಲೂಕಿನ ಮಾಗೋಡ ರಸ್ತೆಯ ಕೋಣೆಮನೆ ಕ್ರಾಸ್‌ಬಳಿ ಮರ ಬಿದ್ದಿರುವುದು. 
ಜಿಲ್ಲೆ

ಅಬ್ಬರದ ಮಳೆಗೆ ಹಲವೆಡೆ ಹಾನಿ

ವಿನಯ ಹೆಗಡೆ

ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸುತ್ತಿದ್ದ ಮಳೆ ಸೋಮವಾರ ಬಿಡುವು ನೀಡಿದೆ. ಭಾನುವಾರ ಸಂಜೆ ಜೋರಾದ ಗಾಳಿಯೊಂದಿಗೆ ಸುರಿದ ಮಳೆಗೆ ಹಲವೆಡೆ ಅನಾಹುತ ಉಂಟಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದಾರೆ.

ಮಾಗೋಡ ರಸ್ತೆಯಲ್ಲಿ ಕೋಣೆಮನೆ ಕ್ರಾಸ್ ಬಳಿ ಮರ ಬಿದ್ದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಸ್ಥಳೀಯರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.