ಜಿಲ್ಲೆ

ಸುಬ್ರಹ್ಮಣ್ಯ ಭಾರಿ ಮಳೆ ; ಕೈಕಂಬ ಕೋಟೆ ಹೊಳೆ ಸೇತುವೆ ಮುಳುಗಡೆ

Dakshina Kannada

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಕೈಕಂಬ ಬಳಿಯ ಕೋಟೆ ಹೊಳೆ ಸೇತುವೆ ಸಂಜೆ ವೇಳೆ ನೆರೆ ನೀರಿಗೆ ಮುಳುಗಡೆಯಾಯಿತು.

ಭಾರಿ ಮಳೆಯಿಂದ ಹೊಳೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ನೀರು ಬಂದು ಸೇತುವೆ ಮೇಲೆ ಹರಿಯಿತು. ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.