ಜಿಲ್ಲೆ

ಬೈಲಕುಪ್ಪೆ ಸುತ್ತಮುತ್ತ ಜೋರು ಮಳೆ

ಮಾದೇಶ್ ತಿ.ನರಸೀಪುರ

ಬೈಲಕುಪ್ಪೆ: ಬೈಲಕುಪ್ಪೆ, ಕೊಪ್ಪ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಜೋರು ಮಳೆ ಸುರಿಯಿತು.


ಬೈಲಕುಪ್ಪೆ ಸಮೀಪ ಮಂಚದೇವನಹಳ್ಳಿ, ತಿರುಮಲಾಪುರ, ಮರಡಿಯೂರು, ದೊಡ್ಡ ಹೊನ್ನೂರು ಹಾಗೂ ಕೊಪ್ಪ ಸಮೀಪದ ರಾಣಿಗೇಟ್, ಗೋಲ್ಡನ್ ಟೆಂಪಲ್, ಗಿರಗೂರು, ದೊಡ್ಡ ಹರವೆ, ಲಮಾ ಕ್ಯಾಂಪ್‌ನಲ್ಲಿ ಮಳೆ ಸುರಿಯಿತು.


ಮುಸುಕಿನ ಜೋಳ ಕಟಾವಿಗೆ ಬಂದಿದ್ದು ರೈತರಿಗೆ ತೊಂದರೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಯುವ ರೈತರಿಗೆ ಅನುಕೂಲವಾಗಿದೆ ಎಂದು ರೈತ ರಾಮೇಗೌಡ ತಿಳಿಸಿದ್ದಾರೆ. ಬೆಣಗಾಲು ಸುತ್ತಮುತ್ತ ತುಂತುರು ಮಳೆ ಸುರಿದಿದೆ.