ಬೆಸಗರಹಳ್ಳಿಯಲ್ಲಿ ಮಳೆ ಬರುತ್ತಿರುವುದು.  
ಜಿಲ್ಲೆ

ಇಳೆಗೆ ತಂಪೆರೆದ ಮಳೆ

ಮದ್ದೂರು: ಪಟ್ಟಣ, ತಾಲೂಕಿನ ಬೆಸಗರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಕೆಲಕಾಲ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರು ನಿಟ್ಟುಸಿರು ಬಿಡುವಂತಾಯಿತು.

ರಾತ್ರಿ ಸುಮಾರು 8 ಗಂಟೆಗೆ ಬಿರುಗಾಳಿ, ಗುಡುಗು ಮಿಂಚು ಸಹಿತ ಆರಂಭವಾದ ಮಳೆ ಕೆಲ ಕಾಲ ಸುರಿಯಿತು. ಬಿರುಗಾಳಿ ಬಂದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕೆಲಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಮಳೆಯಿಂದ ಅವಘಡ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.