ಕಾರ್ಕಳ: ತಾಲೂಕಾದ್ಯಂತ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದ್ದು, ಕಾರ್ಕಳ ನಗರದ ಅಮರಜ್ಯೋತಿ ಬಳಿ ನಿವಾಸಿ ಅನಂತ ಪದ್ಮನಾಭ ಭಟ್ ವಾಸದ ಮನೆಗೆ ತೆಂಗಿನ ಮರ ಬಿದ್ದಿದೆ. ಕಣಜಾರು ಗ್ರಾಮದ ವನಜಾ ಎಂಬುವರ ಮನೆಗೆ ತೆಂಗಿನ ಮರ ಬಿದ್ದಿದೆ. ಕಣಜಾರು ನಿವಾಸಿ ವಾರಿಜ ನಾಯಕ್ ವಾಸ್ತವ್ಯದ ಮನೆಗೆ ಮರಬಿದ್ದಿದೆ. ಶಾಂತಾ ನಾಯ್ಕ ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ ಗಾಳಿಯ ರಭಸಕ್ಕೆ 45 ಅಡಕೆ ಮರ ಹಾಗೂ ಮಾವಿನ ಮರ ಉರುಳಿದೆ. ಸುಂದರ ಪೂಜಾರಿ ಎಂಬುವರ ಮನೆ ಮೇಲೆ ಗೇರುಬೀಜದ ಮರ ಬಿದ್ದು ನಷ್ಟ ಉಂಟಾಗಿದೆ.