ವಳಗೆರೆಹಳ್ಳಿ ಸಮೀಪದ ಮಳೆಯಿಂದ ತೆಂಗಿನ ಬೆಳೆ ಜಲಾವೃತ್ತಗೊಂಡಿರುವುದು 
ಜಿಲ್ಲೆ

ಮಳೆಯಿಂದ ಅಪಾರ ಬೆಳೆ ಹಾನಿ

ಮದ್ದೂರು: ತಾಲೂಕಿನ ರಾಂಪುರ ಮತ್ತು ವಳಗೆರೆಹಳ್ಳಿ ಗ್ರಾಮದ ನಡುವೆ ಹರಿಯುತ್ತಿರುವ ಹೆಬ್ಬಾಳಕ್ಕೆ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ನೀರು ಬಂದ ಪರಿಣಾಮ ಸಮೀಪವಿದ್ದ ಬೆಳೆಗಳು ಮುಳುಗಡೆಯಾಗಿವೆ.

ವಳೆಗರೆಹಳ್ಳಿ, ಬೆಳ್ತೂರು, ಸೊಳ್ಳೆಪುರ ಗ್ರಾಮಗಳ ಹಲವಾರು ಹಳ್ಳಿಗಳ ನೂರಾರು ಎಕರೆ ಜಮೀನುಗಳ ಮೇಲೆ ಮಳೆ ನೀರು ಹರಿದು ಫಸಲು ಹಾನಿಯಾಗಿದೆ. ಮುಂದೆ ಈ ರೀತಿಯಾಗದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಹಾನಿಯಾಗಿರುವ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಸರ್ಕಾರ ನೀಡಬೇಕೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಷ್ಮಾ ಹಾಗೂ ಅಧಿಕಾರಿಗಳು ಆಗಮಿಸಿ ಮಳೆಗೆ ಆಹುತಿಯಾಗಿರುವ ಬೆಳೆಗಳನ್ನು ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.