ಮಂಗಳೂರು: ಕರಾವಳಿ ಕರ್ನಾಟಕ ಸಹಿತ ರಾಜ್ಯದ ಅನೇಕ ಭಾಗಗಳಲ್ಲಿ ಏಪ್ರಿಲ್ 23 ರಿಂದ ಏ.26 ರವರೆಗೆ ಬಿಸಿ ವಾತಾವರಣ (ಹೀಟ್ ವೇವ್) ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚನೆ ನೀಡಿದೆ.
ಮುಂದಿನ 5 ದಿನಗಳಲ್ಲಿ ರಾಜ್ಯದಾದ್ಯಂತ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ .
ಕರಾವಳಿಯಲ್ಲಿ ಮಳೆ ದೂರವಾಗಿ ಹೀಟ್ ವೇವ್ ಕಾಣಿಸಿಕೊಂಡಿರುವ ವಾತಾವರಣ ಮತದಾನದ ಪ್ರಮಾಣದ ಮೇಲೆ ಬೀರುವ ಆತಂಕ ಎದುರಾಗಿದೆ.