ಜಿಲ್ಲೆ

ಕಾರವಾರದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ತಾಪಮಾನ

Uttara Kannada - Subash Hegde

ಕಾರವಾರ: ಕರಾವಳಿ ಕಾದ ಕೆಂಡವಾಗಿದೆ. ಕಾರವಾರ ತಾಲೂಕಿನಲ್ಲಿ ಸತತ ಎರಡು ದಿನಗಳಿಂದ ರಾಜ್ಯದಲ್ಲಿಯೇ ಅತ್ಯಧಿಕ ತಾಪಮಾನ ದಾಖಲಾಗುತ್ತಿದೆ. ಬುಧವಾರ  ಸಾವಂತವಾಡ ಹೋಬಳಿಯಲ್ಲಿ  ರಾಜ್ಯದಲ್ಲಿಯೇ ಅತ್ಯಧಿಕ ತಾಪಮಾನ ದಾಖಲಾಗಿದೆ. ಗುರುವಾರ ಘಾಡಸಾಯಿ ಹಾಗೂ ಮಾವಿನಕುರ್ವಾ ಗ್ರಾಮಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನೀಡಿರುವ ಬುಧವಾರ ವರದಿಯಂತೆ ಕಾರವಾರ ಸಾವಂತವಾಡ ಹೋಬಳಿಯಲ್ಲಿ 42.9 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಕಾರವಾರ ಕಿನ್ನರ 41.8 ಡಿಗ್ರಿ ಸೆಲ್ಶಿಯಸ್, ಘಾಡಸಾಯಿ 42.3 ಡಿಗ್ರಿ ಸೆಲ್ಶಿಯಸ್, ಕುಮಟಾ ಮಿರ್ಜಾನ್-40.7, ಅಂಕೋಲಾ 40.5 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿವೆ.

ಫೆ.25 ರಂದು ಸದಾಶಿವಗಡದಲ್ಲಿ 41.3 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿತ್ತು. ಅದು, ಅಂದು ರಾಜ್ಯದಲ್ಲಿ ಅತ್ಯಧಿಕ ಉಷ್ಣಾಂಶವಾಗಿತ್ತು. ಆ ನಂತರವೂ ನಿರಂತರವಾಗಿ ಬಿಸಿ ಗಾಳಿ ಕರಾವಳಿ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಎನ್‌ಸಿಸಿ ಕ್ಯಾಂಪ್ ಮುಂತಾದ ಬಿಸಿಲಿನಲ್ಲಿ ಮಾಡಬಹುದಾದ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

ಗುರುವಾರ ಕಾರವಾರ ತಾಲೂಕಿನ ಸದಾಶಿವಗಡದಲ್ಲಿ 42.1, ಮುಂಡಗೋಡ ತಾಲೂಕಿನ ಪಾಳಾದಲ್ಲಿ 41.7, ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.