ಜಿಲ್ಲೆ

ಹೃದಯ ರೋಗ ತಪಾಸಣೆ ಶಿಬಿರ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಿಳಾ ದಿನಾಚರಣೆ ನಿಮಿತ್ತ ನಗರದ ಎಸ್​ಡಿಎಂ ನಾರಾಯಣ ಹಾರ್ಟ್​ ಸೆಂಟರ್​ ವತಿಯಿಂದ ಮಾ. 12ರಂದು ಸಾರ್ವಜನಿಕರಿಗೆ ಉಚಿತ ಹೃದಯ ರೋಗ ತಪಾಸಣೆ ಉಚಿತ ಶಿಬಿರ ಮತ್ತು ವೆರಿಕೋಸ್​ ವೇನ್ಸಗೆ ಸಂಬಂಧಿಸಿದಂತೆ ಆರೋಗ್ಯ ಉಪನ್ಯಾಸವನ್ನು ಹಳಿಯಾಳ ರಸ್ತೆಯಲ್ಲಿನ ಪರಿಸರ ಭವನದಲ್ಲಿ ಏರ್ಪಡಿಸಲಾಗಿದೆ.

ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ಹು-ಧಾ ನಾಗರಿಕ ಪರಿಸರ ಸಮಿತಿ ಆಶ್ರಯದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಬಿಪಿ, ಶುಗರ್​, ಇಸಿಜಿ, ಇಕೋ ತಪಾಸಣೆ ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಗುವುದು. ವೆರಿಕೋಸ್​ ವೇನ್ಸಗೆ ಸಂಬಂಧಿಸಿ ಡಾ. ಬಸವರಾಜೇಂದ್ರ ಅನುರಶೆಟ್ರು ಉಪನ್ಯಾಸ ನೀಡುವರು. ಜನರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.