ಜಿಲ್ಲೆ

ಬದಲಾದ ಜೀವನ ಶೈಲಿಯಿಂದ ಹೃದಯಾಘಾತ

ಕರೊನಾ ಲಸಿಕೆ ಕಾರಣವಲ್ಲ

ಕೈಲಾಂಚ: ಜನರ ಜೀವನ ಶೈಲಿ ಬದಲಾಗುತ್ತಿರುವುದೇ ಹೃದಯಾಘಾತ ಹೆಚ್ಚಾಗಲು ಕಾರಣವೇ ಹೊರತು ಕರೊನಾ ಲಸಿಕೆಯಲ್ಲ ಎಂದು ಸಂಸದ ಡಾ.ಸಿ.ಎನ್​. ಮಂಜುನಾಥ್​ ತಿಳಿಸಿದರು.

ಕೈಲಾಂಚ ಗ್ರಾಮದ ಸರ್ಕಲ್​ನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ನಂತರ ಸುದ್ದಿಗಾರೊಂದಿಗೆ ಮಾತನಾಡಿ,

20 ವರ್ಷಗಳಿಂದ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ. ಈಗ ಮಾಧ್ಯಮಗಳಲ್ಲಿ ಸುದ್ದಿ ಹೆಚ್ಚಾಗಿ ಬಿತ್ತರವಾಗುತ್ತಿರುವುದರಿಂದ ಹೆಚ್ಚು ಗಮನ ಸೆಳೆಯುತ್ತದೆ. 2013ರಿಂದ 2018ರವರೆಗ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಿದ್ದು, ಈ ಅವಧಿಯಲ್ಲಿ ಚಿಕ್ಕವಯಸ್ಸಿನ 5 ಸಾವಿರ ಮಂದಿ ರೋಗಿಗಳು ಹೃದ್ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು. ವರ್ಷದಿಂದ ವರ್ಷಕ್ಕೆ ಹೃದಯ ಬೇನೆಗೆ ಒಳಗಾಗುವವರ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡು ಬಂದಿದೆ ಎಂದರು.

1960ರಲ್ಲಿ ಹೃದಯಾಘಾತಕ್ಕೆ ಒಳಗಾಗುವವರ ಪ್ರಮಾಣ ಶೇ.2 ಇತ್ತು. 2016ರಲ್ಲಿ ಅದು ಶೇ.6ಕ್ಕೇರಿದೆ. ರಕ್ತದೊತ್ತಡ, ಮದುಮೇಹ ಸೇರಿ ಹಲವು ರೋಗಗಳು ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಮುಖ್ಯಕಾರಣ ಒತ್ತಡದ ಜೀವನ, ಮದ್ಯ ಮತ್ತು ಧೂಮಪಾನ ಸೇವನೆ ಹೆಚ್ಚಳ, ಸೂಕ್ತಕಾಲದಲ್ಲಿ ಚಿಕಿತ್ಸೆ ಪಡೆಯದೆ ರ್ನಿಲಕ್ಷ$್ಯ ವಹಿಸುವುದು ಸೇರಿ ಹಲವು ಸಮಸ್ಯೆ ಕಾರಣ ಎಂದರು.

ತಪಾಸಣೆ, ಚಿಕಿತ್ಸೆ ಅಗತ್ಯ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಹೃದಯ ಕಾಯಿಲೆಗಳಿಗೆ ಸಂಬಂಧಿಸಿದಂತೆ ತಪಾಸಣೆ ಮತ್ತು ಚಿಕಿತ್ಸೆ ನಡೆಸುವ ಕಾರ್ಯವನ್ನು ರಾಜ್ಯದ 84 ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ 3 ತಾಲೂಕು ಆಸ್ಪತ್ರೆಯಲ್ಲಿ ಈ ಯೋಜನೆ ಇದ್ದು, ಉಳಿದ ಆಸ್ಪತ್ರೆಗಳಿಗೆ ಸದ್ಯದಲ್ಲೇ ವಿಸ್ತರಿಸಲಾಗುವುದು. ಇನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಹೃದಯದ ಕಾಯಿಲೆಗೆ ಸಂಬಂಧಿಸಿದಂತೆ ಚಿಕಿತ್ಸೆ ಹಾಗೂ ತುರ್ತು ಸಂದರ್ಭದಲ್ಲಿ ನೀಡುವ ಇಂಜೆಕ್ಷನ್​ ಅನ್ನು ಲಭ್ಯವಾಗುವಂತೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಗ್ಗೂಡಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಬೇಕೆಂದು ಸಂಸದರು ತಿಳಿಸಿದರು.

ಸಂಸ್ಕರಣಾಘಟಕ: ಕೇಂದ್ರ ಸರ್ಕಾರದ ಹಲವು ಯೋಜನೆಗಳಿಂದ ರೈತರಿಗೆ ಅನುಕೂಲವಾಗಿದೆ. ಮುದ್ರಾಯೋಜನೆಯಡಿ ದೇಶದ 52 ಕೋಟಿ ರೂ. ಮಂದಿಗೆ 32 ಲಕ್ಷ ರೂ. ಕೋಟಿ ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ ಮಾವು ಮತ್ತು ತೆಂಗು ಬೆಳೆಗಾರರಿಗೆ ನಷ್ಟ ಪರಿಹಾರ ನೀಡುವಂತೆ ಕೋರಲಾಗಿದೆ. ರಾಜ್ಯದಲ್ಲಿ ಹಣ್ಣು ಮತ್ತು ತರಕಾರಿಗಳ ಸಂಸ್ಕರಣಾ ಟಕ ಅವಶ್ಯಕವಿದ್ದು, ಬೆಲೆ ಕುಸಿದಾಗ ಅವನ್ನು ಸಂಸ್ಕರಣೆ ಮಾಡಿನೆರವು ನೀಡಬೇಕು. ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಇಂತಹ 40 ಟಕಗಳಿವೆ. ಆದರೆ, ರಾಜ್ಯದಲ್ಲಿ ಇನ್ನೂ ಒಂದೇ ಒಂದು ಟಕವಿಲ್ಲ. ಈಗ ಬೈರಾಪಟ್ಟಣ ಗ್ರಾಮದ ಬಳಿ ಮಾವು ಸಂಸ್ಕರಣಾ ಟಕ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ಸ್ಥಾನ ನೀಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಯಾರೇ ಅಭಿವೃದ್ಧಿ ಮಾಡಿದರೂ ನನ್ನ ಸಹಕಾರ ಇರುತ್ತದೆ. ನಮಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಸಂಸದನಾದ 14 ತಿಂಗಳಲ್ಲಿ 70 ಸಾವಿರ ಕಿಮೀ ಸಂಚಾರ ಮಾಡಿ ವಿವಿಧ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. > ಡಾ. ಸಿ.ಎನ್​. ಮಂಜುನಾಥ್​, ಸಂಸದರು.