ಬಾಳೆಹೊನ್ನೂರು: ಇತ್ತೀಚಿನ ದಿನಗಳಲ್ಲಿ ಶಬ್ಧ ಮಾಲಿನ್ಯದಿಂದ ಮಕ್ಕಳು ಹಾಗೂ ವಯಸ್ಕರಲ್ಲಿ ಶ್ರವಣ ದೋಷ ಅಧಿಕವಾಗಿ ಕಾಣುತ್ತಿದೆ ಎಂದು ಉಡುಪಿಯ ಶ್ರವಣ ತಜ್ಞೆ ಡಾ.ಅಂಕಿತಾ ಹೇಳಿದರು.
ಪಟ್ಟಣದ ರೋಟರಿ ಕ್ಲಬ್ ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಸಮಾಲೋಚನಾ ಶಿಬಿರದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಪಾಲಕರು ತಮ್ಮ ಕಾರ್ಯ ಒತ್ತಡದಿಂದಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಶ್ರವಣ ದೋಷ ಮಾತ್ರವಲ್ಲದೇ ಹಲವು ಮಾನಸಿಕ, ದೈಹಿಕ ಕಾಯಿಲೆಗಳು ಕಂಡುಬರುತ್ತಿದೆ. ಇದಕ್ಕೆ ನಿರಂತರವಾದ ತಪಾಸಣೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಪ್ರಸ್ತುತ ಎಲ್ಲ ಆಸ್ಪತ್ರೆಗಳಲ್ಲೂ ಮಗು ಹುಟ್ಟಿದ ತಕ್ಷಣ ಕಿವಿಯ ಸ್ಕ್ರೀನಿಂಗ್ ತಪಾಸಣೆ ಮಾಡಲಾಗುತ್ತಿದೆ. ಇದರಿಂದ ಹುಟ್ಟಿನಿಂದಲೇ ಸಮಸ್ಯೆ ಇದ್ದರೆ ತಕ್ಷಣಕ್ಕೆ ತಿಳಿದು, ಅದಕ್ಕೆ ಪರಿಹಾರ ದೊರೆಯಲಿದೆ. ಕರೋನ ನಂತರ ಹೆಚ್ಚು ಇಯರ್ ೋನ್‌ಗಳನ್ನು ಬಳಸುತ್ತಿರುವುದರಿಂದ ಶ್ರವಣ ದೋಷಕ್ಕೆ ಒಳಗಾಗಿ ಆಲಿಕೆಯ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ.
ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್, ಕಾರ್ಯದರ್ಶಿ ಬಿ.ಎಸ್.ಸಾಗರ್, ಜೋನಲ್ ಲೆಫ್ಟಿನೆಂಟ್ ಡಾ.ನವೀನ್‌ಲಾಯ್ಡ ಮಿಸ್ಕಿತ್, ಸದಸ್ಯರಾದ ಎಚ್.ಕೆ.ವೆಂಕಟೇಶ್, ಎಂ.ವಿ.ತಿಮ್ಮಯ್ಯ, ಎಂ.ಎಲ್.ಮಂಜೇಶ್, ಬಿ.ಎ.ಸುಧಾಕರ್, ಶ್ರವಣ ತಂತ್ರಜ್ಞರಾದ ಸವಿತಾ, ೀರಜ್, ಲವಕುಮಾರ್ ಮತ್ತಿತರರು ಹಾಜರಿದ್ದರು.