ಕುಂದಾಪುರ: ತಲ್ಲೂರು ಗ್ರಾಪಂ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ತಲ್ಲೂರಿನ ಅಂಗನವಾಡಿ ಕೇಂದ್ರದ ಆವರಣದಲ್ಲೇ ಇಡೀ ಗ್ರಾಮದಿಂದ ಸಂಗ್ರಹಿಸಿದ ತ್ಯಾಜ್ಯ ರಾಶಿಯನ್ನು ತಂದು ಸುರಿಯುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ಮಕ್ಕಳ ಪಾಲಕರು ವಿರೋಧ ವ್ಯಕ್ತಪಡಿಸಿದ್ದರೂ, ಯಾವುದೇ ಕ್ರಮಕೈಗೊಂಡಿಲ್ಲ. ಕಸ ವಿಲೇವಾರಿಗೆ ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಒಂದು ಶೆಡ್ ರೀತಿ ನಿರ್ಮಿಸಿ ಅಲ್ಲಿಗೆ ತಂದು ತ್ಯಾಜ್ಯ ಸುರಿಯಲಾಗುತ್ತೆ. ಇದು ಪುಟ್ಟಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂಬ ಆತಂಕವನ್ನು ಸಾರ್ವಜನಿಕರು ಹಾಗೂ ಪಾಲಕರು ಹೊರಹಾಕಿದ್ದಾರೆ. 1983ರಲ್ಲಿ ಆರಂಭಿಸಲಾದ ಈ ಅಂಗನವಾಡಿ ಕೇಂದ್ರದಲ್ಲಿ ಕಳೆದ ವರ್ಷ 36 ಮಕ್ಕಳಿದ್ದರು. ಆದರೆ ಈ ವರ್ಷ 18 ಮಕ್ಕಳಿದ್ದಾರೆ. ಇದು ಗ್ರಾಮದ ಕೇಂದ್ರ ಸ್ಥಾನದಲ್ಲಿರುವ ಅಂಗನವಾಡಿಯೂ ಹೌದು. ಶೆಡ್ ನಿರ್ಮಿಸಿದ ಜಾಗವೂ ಅಂಗನವಾಡಿ ಕೇಂದ್ರದ ಜಾಗವಾಗಿದ್ದು, ದಾಖಲೆಯಲ್ಲಿದೆ. ಸಮಸ್ಯೆ ಬಗ್ಗೆ ತಲ್ಲೂರು ಗ್ರಾಮಸಭೆಯಲ್ಲಿ ಹಲವಾರು ಬಾರಿ ಪ್ರಸ್ತಾಪವಾಗಿದ್ದರೂ ಈವರೆಗೂ ಇದಕ್ಕೊಂದು ಶಾಶ್ವತ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯಾಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ವಾಡುತ್ತಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪುಟ್ಟ ಮಕ್ಕಳಿರುವ ಅಂಗನವಾಡಿ ಕೇಂದ್ರದ ಹತ್ತಿರವೇ ತ್ಯಾಜ್ಯ ವಿಲೇವಾರಿ ವಾಡುವುದು ಸರಿಯಲ್ಲ. ಈಗಲಾದರೂ ತಲ್ಲೂರು ಗ್ರಾ.ಪಂ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಇಲ್ಲಿಂದ ಸ್ಥಳಾಂತರಿಸಿ, ಜನ ವಸತಿ ಪ್ರದೇಶವಿಲ್ಲದ ಕಡೆಗಳಲ್ಲಿ ಕಸ ವಿಲೇವಾರಿ ವಾಡಿ ಎಂದು ಪಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಂಗನವಾಡಿ ಕೇಂದ್ರದ ಆವರಣದಲ್ಲೇ ಕಸ ವಿಲೇವಾರಿ ವಾಡುವ ಬಗ್ಗೆ ನಮ್ಮ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿ ಪಾಲಕರ ಸಭೆ ನಡೆಸಿದ್ದಾರೆ. ಪಾಲಕರು ಕೂಡ ಗ್ರಾಪಂಗೆ ಮನವಿ ಸಲ್ಲಿಸಿದ್ದಾರೆ. ನಮ್ಮ ಕಡೆಯಿಂದ ಅಲ್ಲಿಂದ ವಿಲೇವಾರಿ ಟಕ ಸ್ಥಳಾಂತರಿಸುವಂತೆ ಪತ್ರ ಬರೆಯಲಾಗುವುದು. ಉಮೇಶ್ ಕೋಟ್ಯಾನ್, ಸಿಡಿಪಿಒ ಕುಂದಾಪುರ ಕಸ ಸಂಗ್ರಹ ಹಾಗೂ ವಿಲೇವಾರಿಯನ್ನು ಟಿಪ್ಸ್ ಸಂಸ್ಥೆಗೆ ವಹಿಸಿಕೊಟ್ದಿದ್ದೇವೆ. ತಲ್ಲೂರು ಗ್ರಾಮದಲ್ಲಿ ಜಾಗದ ಸಮಸ್ಯೆ ಇರುವುದರಿಂದ ಸದ್ಯ ಅಲ್ಲಿ ತಾತ್ಕಲಿಕವಾಗಿ ಶೆಡ್ ವಾಡಿ, ವಿಲೇವಾರಿ ವಾಡಲಾಗುತ್ತಿದೆ. ಆವರಣದಲ್ಲಿ ಸ್ವಚ್ಛತೆ ಕಾಪಾಡುವ ಸಂಬಂಧ ಕ್ರಮವಹಿಸಲಾಗುವುದು. ಪಿಂಗಾಣಿಗುಡ್ಡೆಯಲ್ಲೂ ವಿರೋಧ ಬಂತು. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ, ಯಾವುದೇ ಕ್ರಮವಹಿಸಿಲ್ಲ. ಗಿರೀಶ್ ನಾಯ್ಕ, ತಲ್ಲೂರು ಗ್ರಾ.ಪಂ. ಅಧ್ಯಕ್ಷ