ಶಿಕಾರಿಪುರ: ಚಳಿಗಾಲದಲ್ಲಿ ಮತ್ತೆ ಕರೊನಾ ಹೆಚ್ಚಬಹುದೆಂಬ ಆತಂಕವಿದೆ. ಈಗಾಗಲೇ ಹಲವು ದೇಶಗಳು ಮತ್ತೆ ಲಾಕ್ಡೌನ್ ಮಾಡಿವೆ. ನಮ್ಮಲ್ಲಿ ಸೋಂಕಿತರು ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಆದರೂ ಚಳಿಗಾಲದ ಸಮಯವಾದ್ದರಿಂದ ಜಾಗ್ರತೆ ಅಗತ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ತಾಪಂ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ನೂತನ ಆರೋಗ್ಯ ರಕ್ಷಾ ಸಮಿತಿಯನಾಮ ನಿರ್ದೇಶಿತ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ, ಕಾರ್ಯಾಗಾರದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಆರೋ ಗ್ಯದ ದೃಷ್ಟಿಯಿಂದ ಹಲವು ಯೋಜನೆ ಜಾರಿಗೊಳಿಸವೆ. ಆರೋಗ್ಯಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40 ಅನುದಾನ ನಿಡುತ್ತಿವೆ ಎಂದರು.
ಸ್ವಾಸ್ಥ್ಯ ಸಮಾಜ ನಿರ್ವಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಕಾರ್ಯ ಹಿರಿದು. ನೀವು ವೈದ್ಯರು, ಸಿಬ್ಬಂದಿ, ಜನತೆಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಆರೋಗ್ಯವಂತ ಸಮಾಜ ನಿರ್ವಣವಾಗಬೇಕೆಂಬುದೆ ನಮ್ಮ ಉದ್ದೇಶ ಎಂದು ಹೇಳಿದರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ತಾಪಂ ಅಧ್ಯಕ್ಷ ಉಡುಗಣಿ ಪ್ರಕಾಶ್, ಜಿಪಂ ಸದಸ್ಯರಾದ ಮಮತಾಸಾಲಿ, ರೇಣುಕಾ ಹನುಮಂತಪ್ಪ, ಕೆಪಿಟಿಸಿಎಲ್ ನಿರ್ದೇಶಕ ರಾಮನಾಯ್್ಕ ತಾಪಂ ಸದಸ್ಯರಾದ ಕವಲಿ ಸುಬ್ರಹ್ಮಣ್ಯ, ಪರಮೇಶ್ವರಪ್ಪ, ಸುರೇಶ್ ನಾಯ್್ಕ ಡಿಎಚ್ಒ ಡಾ. ರಾಜೇಶ್ ಸುರಗೀಹಳ್ಳಿ, ಟಿಎಚ್ಒ ಡಾ. ರಾಮಚಂದ್ರಪ್ಪ ಇದ್ದರು.