ಅರಕೇರಾ ಸಮುದಾಯ ಆರೋಗ್ಯ ಕೇಂದ್ರವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ಜಾಗೃತಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ವೈದ್ಯಾಧಿಕಾರಿ ಡಾ.ಬನರಾಜ, ಐಸಿಟಿಸಿ ಆಪ್ತ ಸಮಾಲೋಚಕರಾದ ನಾಗಲಿಂಗಪ್ಪ, ಕ್ಷಯ ರೋಗದ ಮೇಲ್ವಿಚಾರಕ ಮಹೇಶ ನಾಯಕ, ನೇತ್ರಾಧಿಕಾರಿ ವಾದಿರಾಜ್, ಲ್ಯಾಬ್ ಟೆಕ್ನಿಶನ್ ಚಂದ್ರಕಲಾ ಇದ್ದರು.  
ಜಿಲ್ಲೆ

ಆರೋಗ್ಯವಂತ ವ್ಯಕ್ತಿಯೇ ನಿಜವಾದ ಶ್ರೀಮಂತ

ಅರಕೇರಾ: ಉತ್ತಮ ಆರೋಗ್ಯ ಹೊಂದಿದ ವ್ಯಕ್ತಿಯೇ ನಿಜವಾದ ಶ್ರೀಮಂತ. ಆದ್ದರಿಂದ ಆರೋಗ್ಯದ ಕಡೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ವೈದ್ಯಾಧಿಕಾರಿ ಡಾ.ಬನರಾಜ ಹೇಳಿದರು.

ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬುಧವಾರ ಮಾತನಾಡಿದರು.

ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ.

ಉಚಿತ ಆರೋಗ್ಯ ಶಿಬಿರಗಳ ಮೂಲಕ ಚಿಕಿತ್ಸೆಗೆ ಒಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು.

ಐಸಿಟಿಸಿ ಆಪ್ತ ಸಮಾಲೋಚಕ ನಾಗಲಿಂಗಪ್ಪ ಮಾತನಾಡಿ, ಆರೋಗ್ಯವಂತರಾಗಿದ್ದಾಗ ಮಾತ್ರ ನಾವು ದೈನಂದಿನ ಕೆಲಸ ಮಾಡಲು ಸಾಧ್ಯ. ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ರೋಗಗಳು ಆವರಿಸುವುದಿಲ್ಲ.

ಮಾಸಿಕವಾಗಿ ಎಚ್‌ಐವಿ ಪರೀಕ್ಷೆ, ನೇತ್ರ ತಪಾಸಣೆ, ಬಿಪಿ, ಶುಗರ್ ಪರೀಕ್ಷೆ ಮತ್ತು ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಜ್ವರ ಬರುವುದು, ಕದಲ್ಲಿ ರಕ್ತ ಬರುವುದು, ತೂಕ ಇಳಿಕೆ ಈ ತರ ಲಕ್ಷಣಗಳಿದ್ದಲ್ಲಿ ಕಫದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.