ಜಿಲ್ಲೆ

ಆರೋಗ್ಯವಂತ ಬೇಬಿ ಸ್ಪರ್ಧೆ, ಇನ್ನರ್ ವ್ಹೀಲ್ ಕ್ಲಬ್ ನಿಂದ ಆಯೋಜನೆ

Dharwada - Basavaraj Idli

ಹುಬ್ಬಳ್ಳಿ: ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ವತಿಯಿಂದ ನಗರದಲ್ಲಿ ಆರೋಗ್ಯವಂತ ಬೇಬಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ವಿಭಾಗಗಳಲ್ಲಿ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಕ್ಲಬ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಕಾರ್ಯಕ್ರಮ ಮಾರ್ಗದರ್ಶಕಿ ಶ್ರೀವಲ್ಲಿ ಹೆಬಸೂರ, ಉಪಾಧ್ಯಕ್ಷೆ ಕಿರಣ ಆರ್ಶಿದ್, ಇವೆಂಟ್ ಚೇರ್ಮನ್ ಡಾ. ರಾಜೇಶ್ವರಿ ಹುದ್ದಾರ, ಕೋ ಚೇರ್ಮನ್ ಡಾ. ಅರ್ಚನಾ ಬ್ಯಾಹಟ್ಟಿ, ಅಶ್ವಿನಿ ಕೊರಾಡೆ, ಸರಸ್ವತಿ ದೊಡ್ಡಮನಿ ಇತರರು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ವಿಜೇತರು:
ಶ್ರೀಯಾಂನ್ಸ ಕಡ್ಲಿ, ಜಶ್ ಕೊಠಾರಿ, ಆಮೆರ್ ಮಿಸ್ಕಿನ್ ಅವರು 18 ತಿಂಗಳ ಒಳಗಿನ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದರು.

ಯಾನಾ ಶಾ, ತೊಯೇಶ ಪಾಟೀಲ, ಅನ್ವಿ ದೇಶಪಾಂಡೆ, ಸನ್ಮಿತಾ ಕೊಪ್ಪದ ಅವರು 19 ತಿಂಗಳಿಂದ ಮೂರು ವರ್ಷದ ವಿಭಾಗದಲ್ಲಿ, ದೃಶಾ ಇರಕಲ್ಲ, ಮಹನ್ಯಾ ಯರಗುಂಟಿ, ಶಿವಾನಿ ಗದಗ, ಪ್ರಖ್ಯಾತ ಉಡುಪ ಹಾಗೂ ಸಾಚಿ ಶೆಟ್ಟಿ ಅವರು ಮೂರರಿಂದ ಐದು ವರ್ಷದ ವಿಭಾಗದಲ್ಲಿ ಬಹುಮಾನಗಳನ್ನು ಪಡೆದರು.