ಜಿಲ್ಲೆ

ಆರೋಗ್ಯ ಸಂಜೀವಿನಿ ಯೋಜನೆ ವರದಾನ

ಎನ್.ವೆಂಕಟೇಶ್

ಗೌರಿಬಿದನೂರು: ರಾಜ್ಯ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಅವರ ನಿರಂತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರದಿಂದ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿರುವುದು ಸ್ವಾಗತಾರ್ಹ ಎಂದು ರಾಜ್ಯ ಸರ್ಕಾರಿ ನೌಕರ ಸಂದ ತಾಲೂಕು ಅಧ್ಯಕ್ಷ ಎನ್​.ಆರ್​.ಮಂಜುನಾಥ್​ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ.ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ಸರ್ಕಾರಿ ನೌಕರರಿಗೆ 7ನೇ ವೇತನ ಯಥಾವತ್​ ಜಾರಿಗೆ ತಂದಿದ್ದರು. ಅದರ ಬೆನ್ನಲೇ ಆರೋಗ್ಯ ಸಂಜೀವಿನಿ ಸೌಲಭ್ಯ ನೀಡಿದ್ದರಿಂದ ರಾಜ್ಯದ 5.60 ಲಕ್ಷ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ನೇರವಾಗಿ ಪ್ರಯೋಜನವಾಗಲಿದೆ. ಅಲ್ಲದೆ ವೈದ್ಯಕಿಯ ವಿಜ್ಞಾನವು ಈವರೆಗೆ ಮಾನವರಲ್ಲಿ ಕಂಡು ಹಿಡಿದ 2,234 ಕಾಯಿಲೆಗಳಿಗೆ ಸೌಲಭ್ಯ ಸಿಗಲಿದೆ. ಕಾಯಿಲೆಗಳ ವೆಚ್ಚಕ್ಕೆ ಮಿತಿ ಹೇರದೆ ಸಂಪೂರ್ಣ ವೆಚ್ಚ ಭರಿಸುವ ಹಾಗೂ ನಗದು ರಹಿತ ಸೌಲಭ್ಯದ ಯೋಜನೆ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.