ಬುಕ್ಕಾಪಟ್ಟಣ: ಆಧುನಿಕ ಜೀವನ ಶೈಲಿಯಿಂದಾಗಿ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದು
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ರಮೇಶ್ ತಿಳಿಸಿದರು.
ಶಿರಾ ತಾಲೂಕಿನ ಬುಕ್ಕಾಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಾಹಿತಿ ಮತ್ತು ತಪಾಸಣಾ ಶಿಬಿರದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಒತ್ತಡದಲ್ಲಿ ಕೆಲಸ ವಾಡುತ್ತಿದ್ದಾರೆ. ಸಂಪ್ರದಾಯಿಕ ಅಡುಗೆ ವಿಧಾನವನ್ನು ಕೈಬಿಟ್ಟು ಕೇವಲ ಸ್ಟೌ, ಕುಕ್ಕರ್ ಹಾಗೂ ಫ್ರಿಡ್ಜ್, ಗೀಜರ್‌ನಂತಹ ದಿನ ಬಳಕೆ ವಸ್ತುಗಳನ್ನು ಅತಿ ಹೆಚ್ಚಾಗಿ ಬಳಸುತ್ತಿರುವುದರಿಂದ ಅವರಲ್ಲಿ ವ್ಯಾಯಾಮದ ಕೊರತೆ ಉಂಟಾಗುತ್ತಿದೆ ಹಾಗೂ ಅತಿ ಹೆಚ್ಚಿನ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿವೆ. ಆದ್ದರಿಂದ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಯೋಗಾಸನ ಹಾಗೂ ಸರಳ ವ್ಯಾಯಾಮ ವಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ವಿಶ್ವ ವಿದ್ಯಾನಿಲಯದಿಂದ ಕ್ಯಾನ್ಸರ್ ಕಾಯಿಲೆ, ರಕ್ತದೊತ್ತಡ, ಮಧುಮೇಹ ಹಾಗೂ ಮಧ್ಯವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಹಲವಾರು ಕಾಯಿಲೆಗಳ ಬಗ್ಗೆ ವಾಹಿತಿ ನೀಡಿ ತಪಾಸಣೆ ವಾಡಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಹಿಳೆಯರನ್ನು ನಮ್ಮ ಆರೋಗ್ಯ ರಕ್ಷಾ ಕಾರ್ಯಕ್ರಮದಡಿಯಲ್ಲಿ ಶ್ರೀದೇವಿ ಆಸ್ಪತ್ರೆಗೆ ಭೇಟಿ ವಾಡಿ ಚಿಕಿತ್ಸೆಗೆ ತಿಳಿಸಲಾಯಿತು.
ವಲಯದ ಮೇಲ್ಪೀಚಾರಕ ನರೇಶ್, ಗ್ರಾಪಂ ಸದಸ್ಯ ದಿವಾಕರ್, ಜ್ಞಾನ ವಿಕಾಸ ಸಮನ್ವಯಧಿಕಾರಿ ಆಶಾ, ವಲಯದ ಸೇವಾ ಪ್ರತಿನಿಧಿಗಳು ಹಾಗೂ ಸಂದ ಸದಸ್ಯರು ಇದ್ದರು.