ಮಸ್ಕಿಯ ಪುರಸಭೆ ಆವರಣದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಸಂಘಟನಾಧಿಕಾರಿ ನಾಗರಾಜ, ಪ್ರಥಮ ದರ್ಜೆ ಸಹಾಯಕ ಶಿವಣ್ಣ, ಪ್ರಮುಖರಾದ ಶೇಷಪ್ಪ, ಸೋಮನಾಥ, ಸುನೀಲ, ಗದ್ದೆಪ್ಪ, ರವಿಂದ್ರ ಸಿಂಗ್. ರಾಮಸ್ವಾಮಿ ಇನ್ನಿತರರಿದ್ದರು. 
ಜಿಲ್ಲೆ

ಆರೋಗ್ಯಯುತ ಜೀವನಕ್ಕೆ ಪರಿಸರ ಅಗತ್ಯ

ಮಸ್ಕಿ: ಪಟ್ಟಣದ ಪುರಸಭೆ ಆವರಣದಲ್ಲಿ ನನ್ನ ಮಣ್ಣು ನನ್ನ ದೇಶ ( ಮೇರಿ ಮಾಟಿ ಮೇರಾ ದೇಶ) ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಶನಿವಾರ ಚಾಲನೆ ನೀಡಿದರು.

ಎಲ್ಲರೂ ಪರಿಸರ ಸಂರಕ್ಷಿಸಿ

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದೆ. ಈ ಸವಿನೆನಪಿಗಾಗಿ ಆಜಾದಿಕಾ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಜನರು ದೇಶದ ಸಂಸ್ಕೃತಿ ಮತ್ತು ಸಾಧನೆಗಳ ಭವ್ಯ ಇತಿಹಾಸವನ್ನು ಸ್ಮರಿಸಲು ನೆರವಾಗಲಿದೆ. ಆರೋಗ್ಯಯುತ ಜೀವನ ನಡೆಸಲು ಪರಿಸರ ಸಂರಕ್ಷಣೆ ಅತ್ಯಗತ್ಯ. ಅಭಿಯಾನದಡಿ ಮಣ್ಣನ್ನು ಸಂಗ್ರಹಿಸಿ ಸರ್ವಲಾಂಕೃತ ಕಲಶದ ಮೂಲಕ ಆಗಸ್ಟ್ 20 ರೊಳಗೆ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಮುಖ್ಯಾಧಿಕಾರಿ ನರಸರೆಡ್ಡಿ ತಿಳಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ 75 ಸಸಿಗಳನ್ನು ನೆಡಲಾಯಿತು. ಪುರಸಭೆಯ ಸಮುದಾಯ ಸಂಘಟನಾಧಿಕಾರಿ ನಾಗರಾಜ, ಪ್ರಥಮ ದರ್ಜೆ ಸಹಾಯಕ ಶಿವಣ್ಣ, ಪ್ರಮುಖರಾದ ಶೇಷಪ್ಪ, ಸೋಮನಾಥ, ಸುನೀಲ, ಗದ್ದೆಪ್ಪ, ರವಿಂದ್ರಸಿಂಗ್, ರಾಮಸ್ವಾಮಿ ಇನ್ನಿತರರಿದ್ದರು.