ಜಿಲ್ಲೆ

ಸೂರ್ಯ ಉಪಾಸನೆಯಿಂದ ಆರೋಗ್ಯ ವೃದ್ಧಿ

ಉತ್ತರ ಕನ್ನಡ ಡೆಸ್ಕ್

ಯಲ್ಲಾಪುರ: ಸೂರ್ಯನ ಉಪಾಸನೆಯಿಂದ ಪುಣ್ಯ ಲಭಿಸುವ ಜತೆ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ಸಂಸ್ಕೃತ ಪಾಠಶಾಲೆಯ ಸಭಾಭವನದಲ್ಲಿ ರಥಸಪ್ತಮಿಯ ಅಂಗವಾಗಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ‘108 ಸೂರ್ಯ ನಮಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ವ್ಯಾಯಾಮ ಜೀವನದ ಅಂಗವಾಗಬೇಕು. ಸಾಮೂಹಿಕ ಯೋಗ, ಧ್ಯಾನ, ಸೂರ್ಯ ನಮಸ್ಕಾರಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂದರು.

ಪತಂಜಲಿ ಯೋಗ ಸಮಿತಿಯ ಜಿ.ಎಸ್. ಭಟ್ಟ ಹಳವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ.ಕೆ. ಭಟ್ಟ, ಮಹಿಳಾ ಪ್ರಭಾರಿಗಳಾದ ಶೈಲಶ್ರೀ ಭಟ್ಟ, ಗಂಗಾ ಭಟ್ಟ, ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಅಡಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಪತಂಜಲಿ ಸಮಿತಿಯ ನಾಗೇಶ ರಾಯ್ಕರ, ಇತರರಿದ್ದರು.