ಆದನಗೌಡ ಪೊಪಾ 
ಜಿಲ್ಲೆ

ಆರೋಗ್ಯ ಉಚಿತ ತಪಾಸಣೆ ಶಿಬಿರ ನಾಳೆ

ನರೇಶ್ ಕುಮಾರ್

ಕವಿತಾಳ: ಸಮೀಪದ ವಟಗಲ್‌ನ ಶಾರದಾ ಶಾಲೆಯಲ್ಲಿ ಮಾ.13ರಂದು ಆರೋಗ್ಯ ಇಲಾಖೆ, ನೇತಾಜಿ ಯುವಕ ಸಂಘ, ಬಸವ ಪತ್ತಿನ ಸಹಕಾರ ಸಂಘ ಸೇರಿ ವಿವಿಧ ಸಂಘ-ಸಂಸ್ಥೆಗಳಿಂದ ಶಿವಶಂಕ್ರಮ್ಮ, ಆದನಗೌಡ ಪೊಪಾ, ಅಮರಮ್ಮ, ಚಂದ್ರಯ್ಯಗೌಡ, ಸಿದ್ದಲಿಂಗಮ್ಮ, ಮಲ್ಲಿಕಾರ್ಜುನ ಗೌಡ ಸ್ಮರಣಾರ್ಥವಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ.

ತಜ್ಞ ವೈದ್ಯರಿಂದ ಹೃದಯ ಕಾಯಿಲೆ, ನರರೋಗ ಸಮಸ್ಯೆ, ಎಲುಬು ಮತ್ತು ಕೀಳು ತೊಂದರೆ ಸೇರಿದಂತೆ ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕಲ್ಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯವಹಿಸುವರು. ಸುತ್ತಲಿನ ಗ್ರಾಮದ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಪಂ ಸದಸ್ಯ ಆದನಗೌಡ ಕೋರಿದ್ದಾರೆ.