ಗಂಗಾವತಿ: ಉಚಿತ ಆರೋಗ್ಯ ಶಿಬಿರಗಳ ಮೂಲಕ ಹಳ್ಳಿ ಜನರ ಆರೋಗ್ಯ ಕಾಳಜಿ ವಹಿಸಲಾಗಿದ್ದು, ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುವುದು ಎಂದು ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷ ಸುಬ್ರಹ್ಮಣ್ಯೇಶ್ವರರಾವ್ ಹೇಳಿದರು.
ತಾಲೂಕಿನ ಮುಷ್ಟೂರು ಸ.ಹಿ.ಪ್ರಾ. ಶಾಲೆಯಲ್ಲಿ ಲಯನ್ಸ್ ಕ್ಲಬ್, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಣ್ಣು ಮತ್ತು ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.
ಹಳ್ಳಿ ಜನರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಬೇಕೆಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದ್ದು, ಸರ್ಕಾರದ ಆರೋಗ್ಯ ಸೌಲಭ್ಯ ಪಡೆಯಲು ಮಾರ್ಗದರ್ಶನ ನೀಡಲಾಗುವುದು ಎಂದರು. 650ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಲಾಯಿತು.
ಹೆಬ್ಬಾಳ ಬೃಹನ್ಮಠದ ಶಿವಪ್ರಕಾಶ ಸ್ವಾಮೀಜಿ, ತಜ್ಞ ವೈದ್ಯರಾದ ಜಿ.ಚಂದ್ರಪ್ಪ, ವಿ.ವಿ. ಚಿನಿವಾಲರ್, ಮೇಧಾ ಮಲ್ಲನಗೌಡ, ಮಾಧವಶೆಟ್ಟಿ, ಎ.ಸೋಮರಾಜು, ಶಿವಕುಮಾರ, ಎ.ಎಸ್.ಎನ್.ರಾಜು, ಪ್ರಮುಖರಾದ ಈಶ್ವರಯ್ಯಸ್ವಾಮಿ, ಜಿ.ರಾಮಕೃಷ್ಣ, ರಾಘವೇಂದ್ರ ಸಿರಿಗೇರಿ, ಪ್ರಶಾಂತ ರೆಡ್ಡಿ, ಮಲ್ಲಿಕಾರ್ಜುನ ಇತರರಿದ್ದರು.